ಬಂಟ್ವಾಳ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಅಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಯ್ಕೆಯಾದ ಯುವ ವಕೀಲ ಜೀವನ್ ಲೊಯ್ಡ್ ಪಿಂಟೊ.

Coastal Bulletin
ಬಂಟ್ವಾಳ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಅಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಯ್ಕೆಯಾದ ಯುವ ವಕೀಲ ಜೀವನ್ ಲೊಯ್ಡ್ ಪಿಂಟೊ.

ಬಂಟ್ವಾಳ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ., ಬಿ.ಸಿ. ರೋಡ್ ಇದರ ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ 2ನೇ ಬಾರಿಗೆ ಅಧ್ಯಕ್ಷರಾಗಿ ಯುವ ವಕೀಲ ಜೀವನ್ ಲೊಯ್ಡ್ ಪಿಂಟೊ ಮತ್ತು 2ನೇ ಬಾರಿಗೆ ಉಪಾಧ್ಯಕ್ಷರಾಗಿ ವಲೇರಿಯನ್ ಬರೆಟ್ಟೊ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.



ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಡಾ. ಜ್ಯೋತಿ ಡಿ., ಸಹಕಾರ ಅಭಿವೃದ್ದಿ ಅಧಿಕಾರಿ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.


ಜನವರಿ 18ರಂದು ಶನಿವಾರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ನಿರ್ದೇಶಕರಾಗಿ ಚುನಾಯಿತರಾಗಿದ್ದು, 3 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಒಟ್ಟು 14

ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಅಧ್ಯಕ್ಷರಾದ ಜೀವನ್ ಲೋಯ್ಡ್ ಪಿಂಟೊ, ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ, ನಿದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ದ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯಾ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲೊರೆನ್ಸ್ ಕ್ಲಿಫೋರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೊನ್ಸ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ ಮಹಿಳಾ ಮೀಸಲಾತಿ ಸ್ಥಾನದಿಂದ ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ಡಾನ್ಹಾ ಹಾಗೂ ಹಿಂದುಳಿದ ವರ್ಗ ಪ್ರವರ್ಗ ‘ಬಿ’ ಸ್ಥಾನದಿಂದ ವಿಶಾಲ್ ಡಿಸೋಜ ನೂತನವಾಗಿ ಆಯ್ಕೆಗೊಂಡಿರುತ್ತಾರೆ.

Leave a Comment