ಬಂಟ್ವಾಳ :ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ತುಂಬೆ ಹಾಗೂ ಪ್ರಕೃತಿ ಸಂಜೀವಿನಿ ಒಕ್ಕೂಟ ತುಂಬೆ ಇದರ ಸಂಯುಕ್ತ ಆಶ್ರಯದಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮವು ತುಂಬೆ ಗ್ರಾ ಪಂ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ - ಒಕ್ಕೂಟದ ಅಧ್ಯಕ್ಷರಾದ ಶೈನಿ, ಎನ್ ಆರ್ ಎಲ್ ಎಮ್ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ಸುಧಾ, ಬಂಟ್ವಾಳ ತಾಲೂಕು ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕರಾದ
ಕುಸುಮ, ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ, ಬ್ಯಾಂಕ್ ಆಫ್ ಬರೊಡಾದ ಮ್ಯಾನೇಜರ್ ಸ್ವಾಮಿನಾಥ್, ಒಕ್ಕೂಟದ ಕಾರ್ಯದರ್ಶಿ ಆಶಾಲತಾ, ಟೈಲರಿಂಗ್ ತರಭೇತಿ ನೀಡಲು ಬಂದಂತಹ ಸಂಪನ್ಮೂಲ ವ್ಯಕ್ತಿ ಪವಿತ್ರ ತುಂಬೆ. ಹಾಗೂ ಒಕ್ಕೂಟದ ಸಿಬ್ಬಂದಿಗಳಾದ ಎಂಬಿಕೆ ಶಶಿಕಲಾ, ಎಲ್ ಸಿ ಆರ್ ಪಿ ವಿಮಲ್,ಕೃಷಿ ಸಖಿ ಸಂಗೀತ, ಬ್ಯಾಂಕ್ ಸಖಿ ಶೋಭಾ ರವರು ಉಪಸ್ಥಿತರಿದ್ದರು. ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಚಂದ್ರಕಲಾ ರವರು ಸ್ವಾಗತಿಸಿ, ಪಶು ಸಖಿ ಬಬಿತಾ ವಂದಿಸಿದರು.
















