ಬಂಟ್ವಾಳ, ನ. ೪: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಶ್ರೀ ಆಂಜನೇಯ ದೇವರ ಗುಡಿ ನಿರ್ಮಾಣಕ್ಕೆ ಶನಿವಾರ ಕ್ಷೇತ್ರದ ತಂತ್ರಿ ದಿನೇಶಕೃಷ್ಣ ತಂತ್ರಿ ವರ್ಕಾಡಿ ಅವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಮುಖ್ಯ ಅತಿಥಿ ಬೆಂಗಳೂರಿನ ಉದ್ಯಮಿ ಶಿವರಾಮ ಮಯ್ಯ ಕೈಯೊಟ್ಟು ಅವರು ಶಿಲಾನ್ಯಾಸ ನೆರವೇರಿಸಿದರು. ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಪುರೋಹಿತ ವಿಜಯಕೃಷ್ಣ ಐತಾಳ್ ಪುಂಜೂರು, ಅರ್ಚಕ ಜಯರಾಮ ಕಾರಂತ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಆಂಜನೇಯ ಗುಡಿ ನಿರ್ಮಾಣದ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ವೀಳ್ಯ ನೀಡಲಾಯಿತು.
ಮಂಗಳೂರಿನ ಉದ್ಯಮಿ ಜಾರ್ಜ್ ಅಲ್ಬುಕರ್ಕ್, ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಕೈಯೊಟ್ಟು, ಸರಪಾಡಿ ಅರಮನೆ ದಯಾನಂದ ಐತಾಳ್, ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಕೋಶಾಧಿಕಾರಿ ಅರುಣ ಐತಾಳ್, ಪ್ರಮುಖರಾದ ರಾಮಣ್ಣ ಶೆಟ್ಟಿ ಕಲ್ಕೊಟ್ಟೆ,
ಕುಸುಮಾಕರ ಶೆಟ್ಟಿ ಕುರ್ಯಾಳ, ಉಮೇಶ್ ಆಳ್ವ ಕೊಟ್ಟುಂಜ, ಸುಂದರ ಶೆಟ್ಟಿ ಹೊಳ್ಳರಗುತ್ತು, ಕೊರಗಪ್ಪ ಗೌಡ ಪಠಣ, ರಾಧಾಕೃಷ್ಣ ರೈ ಕೊಟ್ಟುಂಜ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಸತೀಶ್ ಪೈ ಸರಪಾಡಿ, ಶಶಿಕಾಂತ ಶೆಟ್ಟಿ ಆರುಮುಡಿ, ಶಿವರಾಮ ಭಂಡಾರಿ, ಗಿರಿನಾಥ ಶರ್ಮ ಬಾಚಕೆರೆ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಮೀನಾ ಅಶೋಕ ಶೆಟ್ಟಿ, ಚೇತನ್ ಬಜ, ಕಿಶನ್ ಸರಪಾಡಿ, ಗಿರೀಶ್ ನಾಯ್ಕ್ ನೀರಪಲ್ಕೆ, ಆನಂದ ಶೆಟ್ಟಿ ಆರುಮುಡಿ, ಕೃಷ್ಣಪ್ಪ ಮೂಲ್ಯ, ಆನಂದ ದೇವಾಡಿಗ, ಬಾಬು ಪೂಜಾರಿ ಕಡವಿನಬಳಿ, ಸಂದೀಪ್ ದೇವಾಡಿಗ, ದಾಸಪ್ಪ ದೇವಾಡಿಗ, ಧನ್ಯರಾಜ್ ದೇವಾಡಿಗ, ಪರಮೇಶ್ವರ ದೇವಾಡಿಗ ಮೊದಲಾದವರಿದ್ದರು.














