Coastal Bulletin

ಬಂಟ್ವಾಳ :ಇಲ್ಲಿನ ದುಗ್ಗಮಾರ ಗುಡ್ಡೆ ಸಹಿತ ಮಜಲೋಡಿ ಮತ್ತು ನಾಕುನಾಡು ಪರಿಸರದಲ್ಲಿ ಕಳೆದ 2 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಕಾಟ ಮತ್ತೆ ಮಂಗಳವಾರ ರಾತ್ರಿ ಆರಂಭಗೊಂಡಿದೆ. ಇಲ್ಲಿನ ಬಹುತೇಕ ಮನೆಗಳಿಂದ ಸಾಕು ನಾಯಿ ಮತ್ತು ಕೋಳಿ ಹಿಡಿದು ಪರಾರಿಯಾಗುತ್ತಿದೆ.

ಇಲ್ಲಿನ ನಿವಾಸಿ ಪುರುಷೋತ್ತಮ ಪೂಜಾರಿ ಎಂಬವರ ಮನೆ ಹಟ್ಟಿಯಿಂದ ಕಾಣೆಯಾಗಿದ್ದ ಪುಟ್ಟ ಕರುವೊಂದು ಮನೆ ಸಮೀಪದ ಗುಡ್ಡೆಯಲ್ಲಿ ಚಿರತೆ ಕಚ್ಚಿದ ಗಾಯದಿಂದ ಸತ್ತು ಬಿದ್ದಿರುವುದು ಪತ್ತೆಯಾಗಿದೆ.

ಈ ಬಗ್ಗೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Comment