ಬಂಟ್ವಾಳ :ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆ ಪ್ರಯುಕ್ತ ಕನ್ಯಾನ ಭಾರತ ಸೇವಾಶ್ರಮದಲ್ಲಿ ಸಮರ್ಪಣಾ ಕಾರ್ಯಕ್ರಮ ಬುಧವಾರ ಶಾಸಕ ರಾಜೇಶ ನಾಯ್ಕ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಆಶ್ರಮವಾಸಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರೊಂದಿಗೆ ಸಹಭೋಜನದಲ್ಲಿ ಫಾಲ್ಗೊಂಡರು.
ಇದೇ ವೇಳೆ ವಿಟ್ಲ ಮೈತ್ರೇಯಿ ಗುರುಕುಲಕ್ಕೆ ಭೇಟಿ ನೀಡಿ ಅಲ್ಲಿನ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಭಾರತ್ ಸೇವಾಶ್ರಮ ಮುಖ್ಯಸ್ಥ ಈಶ್ವರ ಭಟ್, ಗುರುಕುಲ ಪ್ರಮುಖರಾದ ಜಗನ್ನಾಥ, ಶ್ರೀಮತಿ ಭಟ್, ರಮೇಶ್, ಹರೀಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ರವೀಶ್ ಶೆಟ್ಟಿ
ಕರ್ಕಳ, ಕಾರ್ಯದರ್ಶಿ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು , ಸೀತಾರಾಮ ಪೂಜಾರಿ, ಹಷರ್ಿಣಿ ಪುಷ್ಪಾನಂದ, ಉಪಾಧ್ಯಕ್ಷ ರೊನಾಲ್ಡ್ ಡಿ.ಸೋಜ, ಚಂದ್ರವಾತಿ, ಜಯರಾಮ ನಾಯ್ಕ, ಪ್ರಮುಖರಾದ ಭಾರತಿ ಚೌಟ, ಕಮಲಾಕ್ಷಿ ಕೆ.ಪೂಜಾರಿ, ಆನಂದ ಶಂಭೂರು, ಅರವಿಂದ ರೈ, ಜಿನರಾಜ್ ಕೋಟ್ಯಾನ್, ಪ್ರಶಾಂತ್ ಅಗರಿ, ರಘರಾಮ ಶೆಟ್ಟಿ ಕನ್ಯಾನ, ಶಿವಪ್ರಸಾದ್ ಶೆಟ್ಟಿ, ರಘರಾಮ್ ಶೆಟ್ಟಿ ಪಟ್ಲ, ವಿನೋದ್ ಪಟ್ಲ, ಉದಯರಮಣ ಭಟ್ ಮತ್ತಿತರರು ಉಪಸ್ಥಿತಿತರಿದ್ದರು.















