ಬಂಟ್ವಾಳ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಮುದ್ದಿನಿಂದ ಸಲಹುವುದರ ಜೊತೆಗೆ ಪಠ್ಯದಿಂದ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರಿಂದ ನೈತಿಕ ಮೌಲ್ಯ ವೃದ್ಧಿಸುವ ಜೀವನ ಪಾಠವೂ ಅಗತ್ಯವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಮೊಡಂಕಾಪು ಇನ್ಫೆಂಟ್ ಜೇಸಸ್ ಚರ್ಚ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 'ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿದರು. ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕೆ.ಪಿ. ಇವರು ರಚಿಸಿದ 'ಜೀವನ ಸಂಭ್ರಮ' ಚೊಚ್ಚಲ ಕೃತಿ ಬಿಡುಗಡೆ ಮತ್ತು ಕಲಾಶಿಕ್ಷಕ ತಾರಾನಾಥ ಕೈರಂಗಳ ಕೃತಿ ಪರಿಚಯಿಸಿದರು. ಸಾಧಕರು ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ, ಸಿ ಆರ್ ಪಿ ಪ್ರದೀಪ್ ಪೂಪಾಡಿಕಟ್ಟೆ ಮಾರ್ಗದರ್ಶನದಲ್ಲಿ ಜಾನಪದ ನೃತ್ಯ
ನಡೆಯಿತು.
ವಿಧಾನಪರಿಷತ್ ಸದಸ್ಯ ಭೋಜೇಗೌಡ, ಧರ್ಮಗುರು ವಲೇರಿಯನ್ ಡಿಸೋಜ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬನರ್ಾಡ್ ಸಲ್ದಾನ , ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಸುಧಾ, ಬಿಆರ್ ಪಿ ವಿದ್ಯಾ, ರವೀಂದ್ರ, ಚೆನ್ನಪ್ಪ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಮೇರಾವು ಉಮಾನಾಥ ರೈ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೆ.ರಮೇಶ್ ನಾಯಕ್, ಪ್ರಮುಖರಾದ ನಾರಾಯಣ ಪೂಜಾರಿ, ಜತ್ತಪ್ಪ ಗೌಡ, ಮುರಳಿಕೃಷ್ಣ, ಬಿ.ಕೆ.ಭಂಡಾರಿ, ಜಯರಾಮ್ ಬಿ., ಸಂತೋಷ್ ಕುಮಾರ್, ಮೆಲ್ವಿನ್, ಜೋಯೆಲ್, ನೋಣಯ್ಯ, ವಿಷ್ಣು ಹೆಬ್ಬಾರ್ ಮತ್ತಿತರರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕೆ.ಪಿ.ಸ್ವಾಗತಿಸಿ, ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ವಂದಿಸಿದರು. ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.














