ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕೇಂದ್ರ ಸಕರ್ಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಮಂಜೂರಾದ ಪೌಷ್ಟಿಕ ಆಹಾರ ಮತ್ತು ಧವಸಧಾನ್ಯ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು.
ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ, 2025ರ ವೇಳೆಗೆ ಭಾರತ ಕ್ಷಯರೋಗ ಮುಕ್ತಗೊಳಿಸುವ ಪ್ರಧಾನಿ ಕನಸು ಈಡೇರಿಸುವಲ್ಲಿ ಸಮಾಜ ಸೇವಾ ಸಂಘಟನೆಗಳು ಕೈ ಜೋಡಿಸಬೇಕು ಎಂದರು.
ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಎಂಸಿ ಆಸ್ಪತ್ರೆ ವೈದ್ಯ ಡಾ. ಅಜಯ್ ಮಲ್ಯ, ಪ್ರಮುಖರಾದ
ಸುಕುಮಾರ್ ಅರ್ಕುಳ , ಕೇಶವ ದೋಟ, ಡೇವಿಡ್, ಕೃಷ್ಣಮೂರ್ತಿ , ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ , ಅಶೋಕ್ ಶೆಟ್ಟಿ ಫರಂಗಿಪೇಟೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಉಮೆಶ್ ಸೇಮಿತ, ಗಾಯತ್ರಿ ಚಿದಾನಂದ, ವಿದ್ಯಾ ಶಿವರಾಜ್, ಬಸವರಾಜ್ ಮತ್ತಿತರರು ಇದ್ದರು.
ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ವಂದಿಸಿದರು.















