ಬಂಟ್ವಾಳ: ಇಲ್ಲಿನ ಕಾರಿಂಜ ಕ್ಷೇತ್ರ ಸಮೀಪದ ಕೊಡ್ಯಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಮರ ಕಡಿದು ಖಾಸಗಿ ಮರದ ಮಿಲ್ಲಿಗೆ ಸಾಗಾಟ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಘಟಕ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಿ.ಸಿ.ರೋಡಿನ ಗಾಣದಪಡ್ಪು ಬಳಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ, 'ದೇವಶ್ಯಪಡೂರು ಗ್ರಾಮದ ಕುಂಟಾಲ್ ಪಲ್ಕೆ ಎಂಬಲ್ಲಿ ಪ್ಲಾಂಟೇಷನ್ ಮಾಡಲು ಇದೇ 1 ರಂದು ಕೊಡ್ಯಮಲೆ ಕಾಡಿನಿಂದ ಮರ ಕಡಿಯಲು ವ್ಯಕ್ತಿಯೊಬ್ಬರಿಗೆ ಅರಣ್ಯ ಇಲಾಖೆ ಪರವಾನಿಗೆ ನೀಡಿದೆ. ಆದರೆ ಒಂದು ದಿನ ಮೊದಲೇ ಅವರು ಅಕ್ರಮವಾಗಿ ಮರ ಕಡಿದು ತನ್ನ ಸ್ವಂತ ಮರದ ಮಿಲ್ ಗೆ ಸಾಗಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಮತ್ತು ವಲಯ ಅರಣ್ಯಾಧಿಕಾರಿ ರಾಜೇಶ ಬಳಿಗಾರ್ ಬಂದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಪ್ರಕರಣ ದಾಖಲಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ
ಹಿಂತೆಗೆದುಕೊಂಡರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪುರಸಭೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಯುವ ಮೋಚರ್ಾ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶ ಸುದರ್ಶನ್ ಬಜ, ಪ್ರಮುಖರಾದ ಡೊಂಬಯ ಅರಳ, ಪ್ರಕಾಶ್ ಅಂಚನ್, ಸುರೇಶ್ ಕೋಟ್ಯಾನ್, ಹರಿಪ್ರಸಾದ್ ಭಂಡಾರಿಬೆಟ್ಟು, ಪುರುಷೊತ್ತಮ ಶೆಟ್ಟಿ, ಗಣೇಶ್ ರೈ, ರಮಾನಾಥ ರಾಯಿ, ಸಂತೋಷ್ ಕುಮಾರ್ ಬೆಟ್ಟು, ಆನಂದ ಎ.ಶಂಭೂರು, ಉಮೇಶ್ ಅರಳ, ಪ್ರಶಾಂತ್ ಕೆಂಪುಗುಡ್ಡೆ, ಪ್ರದೀಪ್ ಅಜ್ಜಿಬೆಟ್ಟು, ಚಿದಾನಂದ ರೈ ಕಕ್ಯ, ಸೀತಾರಾಮ ಪೂಜಾರಿ, ದಿನೇಶ್ ದಂಬೆದಾರ್, ಯಶೋಧರ ಕರ್ಬೆಟ್ಟು, ಕಿಶೋರ್ ಶೆಟ್ಟಿ, ಅಶ್ವಥ್ ರಾವ್ ಬಾಳಿಕೆ, ಅನೂಪ್ ರಾಜ್, ಲಕ್ಷಣ್ ರಾಜ್ ಮತ್ತಿತರರು ಇದ್ದರು.















