ಪುಂಜಾಲಕಟ್ಟೆ :ಮನೆಗೆ ನುಗ್ಗಿದ ಕಳ್ಳರು ಮನೆಯವರೆಲ್ಲಾ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಗೃಹಿಣಿಯೊಬ್ಬರ ಕಾಲ್ಚೈನ್ ತುಂಡರಿಸಿ ಕಳ್ಳತನ ಮಾಡಿದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿ ಮಚ್ಚಿನ ಗ್ರಾಮದ ಕುದ್ರಡ್ಕದಲ್ಲಿ ನಡೆದಿದೆ.
ಕುದ್ರಡ್ಕ ನಿವಾಸಿ ನವಾಝ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯವರೆಲ್ಲಾ ಮಲಗಿದ್ದ ವೇಳೆ ಮನೆಯ ಹಿಂಬಾಗಿಲಿನ ಚಿಲಕ ಮುರಿದ ಕಳ್ಳರು ಒಳ ಪ್ರವೇಶಿದ್ದರು. ಕಪಾಟು ಜಾಲಾಡಿ ಅದರಲ್ಲಿದ್ದ 20 ಸಾವಿರ ರೂ.ನಗದು ಕದ್ದೊಯ್ದಿದ್ದಾರೆ. ಅಲ್ಲೇ ಪಕ್ಕದಲ್ಲಿ ಮಲಗಿದ್ದ
ನವಾಝ್ ಅವರ ಸಹೋದರಿ,ಫಾತಿಮತ್ ಝುಹುರಾ ಅವರು ಧರಿಸಿದ್ದ 16 ಗ್ರಾಂ ತೂಕದ ಚಿನ್ನದ ಕಾಲ್ಚೈನ್ ತುಂಡರಿಸಿ ದೋಚಿದ್ದಾರೆ.
ಮಲಗಿದ್ದವರ ಮೇಲೆ ಅಮಲು ಬರುವ ಸ್ಪ್ರೇ ಸಿಂಪಡಿಸಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















