ವಿಶ್ವ ಪರಿಸರ ದಿನದಂದು ವಿವಿಧ ಸಂಘ ಸಂಸ್ಥೆಗಳು ವಿವಿಧ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮೊಡಂಕಾಪು ರೋಟರಿಯ ಅಧ್ಯಕ್ಷರು ಹಾಗೂ ನಿಯೋಜಿತ ಅಧ್ಯಕ್ಷರು ಕಳೆದ ಒಂದು ವರ್ಷದಿಂದ ಸದ್ದಿಲ್ಲದೇ ನಿರಂತರ ಸ್ವಚ್ಛತಾ ಅಭಿಯಾನವನ್ನು ಮಾಡುತ್ತ ಬರುತಿದ್ದಾರೆ.
ಸುಮಾರು ಒಂದು ವರ್ಷದಿಂದ ಮೊಡಂಕಾಪು ಸುತ್ತು ಮುತ್ತ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನು ಸ್ವಚ್ಛ ಮಾಡುವ ದ್ರಷ್ಟಿಯಿಂದ "ಸ್ವಚ್ಛತಾ ಅಭಿಯಾನವನ್ನು" ಜೂನ್ 2021ರಿಂದ ಪ್ರತೀ ಭಾನುವಾರ ಬೆಳಿಗ್ಗೆ 07:30ರಿಂದ 09:30 ರ ತನಕ ಬಂಟ್ವಾಳ ಪುರಸಭೆಯ ಕಾರ್ಮಿಕರೊಂದಿಗೆ ಯಾವುದೇ ಗೈರು ಹಾಜರಿಯಿಲ್ಲದೇ ನಡೆಸಿಕೊಂಡು ಬಂದಿದ್ದು ಮಾತ್ರವಲ್ಲದೆ ಎಲ್ಲಾ ಶಾಲಾ ಮಕ್ಕಳಿಗೂ, ವ್ಯಾಪಾರಸ್ಥರಿಗೂ ಪರಿಸರದ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿ ಹೇಳಿ ಕಾಳಜಿಯನ್ನು ಮೂಡಿಸುತ್ತಾರೆ. ಹಿಂದಿನ ಮೊಡಂಕಾಪು ರೋಟರಿ ಅಧ್ಯಕ್ಷರಾದ ಇಲಿಯಾಸ್ ಸಾಂಟಿಕ್ಸ್ ಅವರು ಮಂಗಳೂರಿನಿಂದ ಪ್ರತಿ ಭಾನುವಾರ ಬೆಳಿಗ್ಗೆ ಬಂದು ನಗರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂದು ಕೆಲಸ ಮಾಡಿದವರಿಗೆಲ್ಲರಿಗೂ ಅವರ ಕುಶಿಯಂತೆ ಹೋಟೆಲಿನಲ್ಲಿ ಉಪಹಾರ ಮಾಡಿಸಿ ಬೀಳ್ಕೊಡುತ್ತಿದ್ದರು. ಪರಿಸರ ಕಾಳಜಿ ನಿತ್ಯ ನಿರಂತರವಾಗಿರಬೇಕು ಎಂಬ ಕಾಳಜಿಯಿಂದ ಅಧಿಕಾರಾವಧಿಯನ್ನು ಪೂರೈಸಿ ಪದವಿಯ ಮುಂದಿನವರಿಗೆ ಬಿಟ್ಟು ಕೊಟ್ಟಾಗ ಹೇಳಿದ ಮಾತು ಒಂದೇ "ಪರಿಸರದ ಜೊತೆ ಕೈ ಜೋಡಿಸಿ ಕೆಲಸ ಮಾಡುವ ಪ್ರತಿಯೊಬ್ಬ ಕೂಡಾ ಹಸಿದ ಹೊಟ್ಟೆಯಿಂದ ಹೋಗಬಾರದು ಎಂಬ ಉದ್ದೇಶದಿಂದ ಅದರ ಖರ್ಚು ವೆಚ್ಚಗಳ ನಾನು ನೋಡಿಕೊಳ್ಳಬಲ್ಲೆ ಎಂಬ ವಾಗ್ಧಾನ
ನೀಡಿದ್ದಾರೆ.
ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ಡಾ.ಗೋವರ್ಧನ್ ರಾವ್ ಅವರು ಅದೆಷ್ಟೋ ವರ್ಷ್ಗಳಿಂದ ಎಲೆಯ ಮರೆಯ ಕಾಯಿಯಂತೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಂದು ರೋಟರಿಯೊಂದಿಗೆ ಸೇರಿಕೊಂಡು ನೂರೊಂದು ಸಮಾಜಮುಖಿ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ.
ಈ ಸಂದರ್ಭದಲ್ಲಿ ಅವರು ಸಾರ್ವಜನಿಕರಲ್ಲಿ ಕಳಕಳಿಯಾಗಿ ವಿನಂತಿಸುವುದು ಏನೆಂದರೆ ಕೈಯಲ್ಲಿ ಹಿಡಿದ ಕಸವ ಎಸೆಯುವ ಬಗ್ಗೆ ಚಿಂತನೆಯಿರಲಿ. ರೋಟರಿ ಕ್ಲಬ್ ಮೊಡಂಕಾಪು ಯಾವಾಗಲೂ ನಗುಮುಖದಿಂದ ಸ್ವಚ್ಚತೆಗೆ ಪ್ರಧಾನ್ಯತೆ ನೀಡುತ್ತದೆ. ನಾವೆಲ್ಲ ಬದಲಾಗೋಣ. ಸಮಾಜಕ್ಕೆ ಮಾದರಿಯಾಗೋಣ, ಮಾತ್ರವಲ್ಲ ಒಂದು ಸುಂದರ ನಗರವ ನಿರ್ಮಿಸೋಣ, ಈ ಕಾರ್ಯ ದಲ್ಲಿ ರೋಟರಿ ಒಂದು ಹೆಜ್ಜೆ ಮುಂದಿಟ್ಟು ನಿಮ್ಮ ಜೊತೆಗಿದೆ. ಸಮಾಜ ಕಟ್ಟೋಣ, ಪರಿಸರದ ಜೊತೆಗೆ ಒಂದು ಹೆಜ್ಜೆ ಮುಂದಿಟ್ಟು ನಡೆವ ನಮ್ಮೊಂದಿಗೆ ಕೈ ಜೋಡಿಸಿ. ನಿಮ್ಮದೇ ನಗರ ನಿಮ್ಮದೇ ಕುಶಿ. ಕೊಟ್ಟು ಹೋಗೋಣ. ಪ್ರಕೃತಿ-ಉಳಿವು-ಅಳಿವು-ಅಳಿವು ನಿಮ್ಮ ಕೈಯಲ್ಲಿದೆ. ಪರಿಸರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತ ಮುಂದಿನ ಮುಂದಿನ ತಲೆಮಾರಿಗೆ ಬಿಟ್ಟು ಹೋಗುವ ಅದ್ಭುತ ಕರ್ಮಭೂಮಿಯಾಗಿರಲಿ. ಎನ್ನುತ್ತಾರೆ ಡಾ ಗೋವರ್ಧನ್ ರಾವ್.













