ಬಂಟ್ವಾಳ : ಪುದು ಗ್ರಾಮದ ಸುಜೀರು ದೈಯಡ್ಕ ಬಳಿಯ ಶ್ರೀ ರಕ್ತೇಶ್ವರಿ ಸಪರಿವಾರ ದೈವಗಳ ಸಾನಿಧ್ಯದಲ್ಲಿ ರಕ್ತೇಶ್ವರಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತುನೇಮೋತ್ಸವವು ಮೇ ೮ ಮತ್ತು ೯ರಂದು ನಡೆಯಲಿದೆ.
ಮೇ ೮ರಂದು ತಂತ್ರಿಗಳ ಆಗಮಿಸಿದ್ದು ದೇವತಾ ಪ್ರಾರ್ಥನೆ, ಗೋಪೂಜೆ, ವಾಸ್ತು ಪೂಜೆ, ರಕ್ಷೆಘ್ನ ಹೋಮ, ದೈವಗಳ ಬಿಂಬ ಶುದ್ಧಿ ನಡೆಯಲಿದೆ. ಮೇ ೯ರಂದು ಶ್ರೀ ಅಶ್ವತ್ಥನಾರಾಯಣ ಹಾಗೂ ರಕ್ತೇಶ್ವರಿ ಸಪರಿಹಾರ ದೈವಗಳ ಪ್ರತಿಷ್ಠೆ - ಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಮಕೃಷ್ಣ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಕಾಶ್ಚಂದ್ರ
ರೈ ದೇವಸ್ಯ, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಸಂಜೀವ ಪೂಜಾರಿ ಬಿ.ಸಿ.ರೋಡು, ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್, ಉದ್ಯಮಿ ಉಮೇಶ್ ಸಾಲಿಯಾನ್, ಪುದು ಗ್ರಾಮ ಪಂಚಾಯತ್ ಸದಸ್ಯ ವಿಷು ಕುಮಾರ್ ಆಗಮಿಸಲಿದ್ದಾರೆ.
ರಾತ್ರಿ ರಕ್ತೇಶ್ವರಿ ದೈವದ ನೇಮ ಮತ್ತು ಕೊರತಿ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ ಎಂದು ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














