ಬಂಟ್ವಾಳ: ಬಿ.ಸಿ. ರೋಡಿನ ಶ್ರೀ ರಕೇಶ್ವರೀ ದೇವೀ ಸನ್ನಿಧಿಯಲ್ಲಿ ಏ.7ರಿಂದ 9ತನಕ ನೀಲೇಶ್ವರ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ಮಾರ್ಗ ದರ್ಶನದಂತೆ ವೇದಮೂರ್ತಿ ಪಳನೀರು ಅನಂತ ಭಟ್ಟರ ಉಪಸ್ಥಿತಿಯಲ್ಲಿ ವರ್ಷಾವಧಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಿ.ಮೋಹನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ ಪ್ರಯುಕ್ತ ಸಂಜೆ ಗಂಟೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.















