ಬಂಟ್ವಾಳ :ಪ್ರೀತಿ ಗೇಮ್ಸ್ ಕ್ಲಬ್ (ರಿ.) ಪೆರ್ಮಂಕಿ ಇದರ 43ನೇ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ಫೆ. 7 ರಂದು ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ ನ ವೇದಿಕೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 8-00ಕ್ಕೆ ಸಂಘದಲ್ಲಿ ಗಣಹೋಮ,ಬೆಳಿಗ್ಗೆ ಗಂಟೆ 10-00ಕ್ಕೆ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ,ಮಧ್ಯಾಹ್ನ ಶ್ರೀ ಸದಾಶಿವ ದೇವರಿಗೆ ಹೂವಿನ ಪೂಜೆ,12-15ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ ವೇದಿಕೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಂದ ಹಾಗೂ ಪ್ರತಿಭಾವಂತ ಕಲಾವಿದರಿಂದ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸಮ್ಮಾನ ನಡೆಯಲಿದ್ದು ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಾತ್ರಿ ಗಂಟೆ 8-30ಕ್ಕೆ ಅನ್ನಸಂತರ್ಪಣೆ ಬಳಿಕ 9-00 ರಿಂದ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ತುಳು ಹಾಸ್ಯಮಯ ನಾಟಕ 'ಎಲ್ಲೇ ದಾದ ಎರೆ ಗೊತ್ತು' ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪ್ರ. ಕಾರ್ಯದರ್ಶಿ ಶ್ರೀನಾಥ್ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














