ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ-ಸಾಧಕರಿಗೆ ಸನ್ಮಾನ-ಸಾಂಸ್ಕ್ರತಿಕ ಕಲರವ

Coastal Bulletin
ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ-ಸಾಧಕರಿಗೆ ಸನ್ಮಾನ-ಸಾಂಸ್ಕ್ರತಿಕ ಕಲರವ

ಬಂಟ್ವಾಳ ತಾಲೂಕಿನ ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ಅಕ್ಷರ ಉತ್ಸವ" ವೈವಿದ್ಯಮಯವಾಗಿ ಸಂಪನ್ನಗೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕ್ರತಿಯ ಪಾಠದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುತ್ತಿರುವ ಇಂತಹ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಶಾಲಾ ಸಂಚಾಲಕ ಮೋಹನ್ ರೈ.ಕೆ. ಅಧ್ಯಕ್ಷತೆ ವಹಿಸಿದ್ದರು. ನಮ್ಮ ಶಾಲೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಊರಪರವೂರ ದಾನಿಗಳ ಬೆಂಬಲದಿಂದ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಅವರು ಹೇಳಿದರು.

ಸನ್ಮಾನ:

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಉದ್ಯಮಿ ಸುನೀಲ್ ಶ್ರೀಧರನ್, ಬೆಂಗಳೂರಿನ ಹೈಕೋರ್ಟು ನ್ಯಾಯವಾದಿ, ಅಂತರರಾಷ್ಟ್ರೀಯ ಈಜು ಪಟು ಸಂಧ್ಯಾ ಪ್ರಭು, ಮಂಗಳೂರಿನ ನೋಟರಿ & ನ್ಯಾಯವಾದಿ ರಾಘವೇಂದ್ರ ರಾವ್, ಮೈಸೂರಿನ ಡಾ. ಉಲ್ಲಾಸ್, ಪತ್ರಕರ್ತ-ರಂಗನಿರ್ದೇಶಕ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಉದ್ಯಮಿ ಟಿ.ಹರೀಂದ್ರ ಪೈ ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಅಮ್ಮು ರೈ ಹರ್ಕಾಡಿ, ಉದ್ಯಮಿ ಪ್ರೀತಮ್ ಶೆಟ್ಟಿ ದಂಡೆಗೋಳಿ, ಶ್ರೀ ಕಾರೀಂಜೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಗೋಪಾಲ ಶೆಟ್ಟಿ, ಪೋಷಕ ಸಂಘದ

ಅಧ್ಯಕ್ಷ ಅರುಣ್ ಐತಾಳ್, ಶ್ರೀ ಹರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಭಾರತಿ ಎಸ್.ರೈ, ಶಾಲಾ ನಾಯಕಿ ಧನ್ವಿ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮೋಹನ್ ಎಚ್. ವರದಿ ವಾಚಿಸಿದರು. ಶಿಕ್ಷಕ ಸುಕೇಶ್ ಕೆ.ಸ್ವಾಗತಿಸಿದರು. ಶಿಕ್ಷಕಿ ಮೆಲ್ವಿನಾ ವಂದಿಸಿದರು.ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ನಡೆದ ವೈವಿದ್ಯಮಯ ನೃತ್ಯಗಳು, ಪ್ರಹಸನ, ನಾಟಕ, ಯಕ್ಷಗಾನ ವಿಶೇಷ ಗಮನ ಸೆಳೆಯಿತು.

ಉದ್ಘಾಟನಾ ಸಮಾರಂಭ:

ಶಾಲಾ ಸಂಚಾಲಕ ಮೋಹನ್ ರೈ ಕೆ.ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪೋಷಕ ಶಂಕರ ಆಚಾರ್ಯ ಕೊರಗಟ್ಟೆ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿಗಳಾದ ತುಕಾರಾಂ ಗೌಡ, ಪ್ರಕಾಶ್ ಗಟ್ಟಿ, ಪೋಷಕರಾದ ಶೈಲೇಂದ್ರ ಜೈನ್, ದಿನಕರ ಸಾಲ್ಯಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Leave a Comment