ಜೆಸಿಐ ಮಡಂತ್ಯಾರಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Coastal Bulletin
ಜೆಸಿಐ ಮಡಂತ್ಯಾರಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

ಬಂಟ್ವಾಳ : ಜೆಸಿಐ ಮಡಂತ್ಯಾರಿನ 36ನೇ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಮಹಿಳಾ ಅಧ್ಯಕ್ಷೆಯಾಗಿ ಜೇಸಿ ಸಾಯಿಸುಮಾ ಎಂ. ನಾವಡ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜ. 4ರಂದು ಮಡಂತ್ಯಾರಿನ ಗಣಪತಿ ಮಂಟಪದಲ್ಲಿ ನಡೆಯಿತು.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ, ವಲಯ 15ರ ಅಧ್ಯಕ್ಷ ಜೆ.ಎಫ್.ಎಫ್. ಸಂತೋಷ ಶೆಟ್ಟಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ನ್ಯಾಯವಾದಿ ಸುರೇಶ್ ಕುಮಾರ್ ಬಿ. ನಾವೂರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷ ಜೇಸಿ ಡಾ. ಹರ್ಷ ಸಂಪಿಗೆತ್ತಾಯ ಹಾಗೂ ಜೆಸಿಐ ಭಾರತ, ವಲಯ 15, ನಂದಿನಿ(ಪ್ರಾಂತ್ಯ ಎ) ಯ

ಉಪಾಧ್ಯಕ್ಷ ಜೆ.ಎಫ್.ಎಮ್. ಅರುಣ್ ಮಾಂಜ ಇವರ ಗೌರವ ಉಪಸ್ಥಿತಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಜೇಸಿ ಅಮಿತಾ ಅಶೋಕ್, ಪೂರ್ವಾಧ್ಯಕ್ಷ ಜೇಸಿ ವಿಕೇಶ್ ಮಾನ್ಯ, ಕಾರ್ಯದರ್ಶಿ ಜೇಸಿ ಯತೀಶ್ ರೈ ಹಾಗೂ ಯುವ ಜೇಸಿ ಅಧ್ಯಕ್ಷ ಜೆಜೆಸಿ ಕೃಪಾಲ್ ಉಪಸ್ಥಿತರಿದ್ದರು.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು , ಸದಸ್ಯರು, ಅನೇಕ ಗಣ್ಯರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Leave a Comment