ಬಂಟ್ವಾಳ : ರಾಜಶ್ರೀ ರಿಕ್ಷಾ ಪಾರ್ಕ್ ಆಶ್ರಯದಲ್ಲಿ ದಿ ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ಅವರ ಪುತ್ರ ಉದ್ಯಮಿ ಭುವನೇಶ್ ಪಚ್ಚಿನಡ್ಕ, ಅವರು ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆಯು ಮೇ 3ರಂದು ಸೋಮವಾರ ಕಡೆಗೋಳಿಯ ಪೊಳಲಿ ದ್ವಾರದ ಸಮೀಪ ನಡೆಯಿತು.
ಈ ಸಂದರ್ಭದಲ್ಲಿ ಭುವನೇಶ್ ಪಚ್ಚಿನಡ್ಕ ರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಪ್ರಮುಖರಾದ ಭಾಸ್ಕರ ಚೌಟ ಕುಮ್ದೇಲ್, ದೇವದಾಸ ಶೆಟ್ಟಿ ಕೊಡ್ಮಾಣ್, ಉಮೇಶ ಸಾಲಿಯಾನ್
ಬೆಂಜನಪದವು, ಭರತ್ ಕುಮ್ದೇಲ್,ಮನೋಜ್ ಆಚಾರ್ಯ ನಾಣ್ಯ, ವಿದ್ಯಾ ಕುಮ್ದೇಲ್, ಮಾದವ ನಾಣ್ಯ ಸೋಮನಾಥ ಕಡೆಗೋಳಿ,ರಿಕ್ಷಾ ಪಾರ್ಕ್ ಅಧ್ಯಕ್ಷ ನೀಲನ್ ಹಾಗೂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.









