ಬಂಟ್ವಾಳ: ಜಿಲ್ಲಾ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರ ಪಿಸ್ತೂಲಿನಿಂದ ಮಿಸ್ ಫೈರಿಂಗ್ ಆಗಿ ಅವರ ಕಾಲಿಗೆ ಗಾಯವಾದ ಘಟನೆ ಮಂಗಳವಾರ ಸಂಜೆ ಅನಂತಾಡಿಯಲ್ಲಿ ನಡೆದಿದೆ. ಅತಕ್ಷಣ ಅವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿಯಲ್ಲಿ ಕಲ್ಲಿನ ಕೋರೆಯ ಇನ್‌ಚಾರ್ಜ್ ಚಿತ್ತರಂಜನ್ ಶೆಟ್ಟಿಯವರಿಗಿದ್ದು ಅಲ್ಲಿಗೆ ತೆರಳಿದ್ದ ವೇಳೆ ತನ್ನ ಲೈಸನ್ಸೆಡ್ ಪಿಸ್ತೂಲನ್ನು ಹೊರತೆಗೆಯುವ ವೇಳೆ ಆಕಸ್ಮಿಕವಾಗಿ ಮಿಸ್‌ಫೈಯರಿಂಗ್ ಆಗಿ
ಕಾಲಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಸ್ತೂಲ್ ಲಾಕ್ ಆಗದೆ ಈ ಅವಘಡ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.