ಬಂಟ್ವಾಳ:ಬ್ರಹ್ಮಶ್ರೀ ನಾರಾಯಣಗುರು ಅಸ್ಪೃಷ್ಯತೆ ನಿವಾರಣೆ ಜೊತೆಗೆ ಶಿಕ್ಷಣ, ಸಂಘಟನೆ ಮತ್ತು ಸ್ವಾಭಿಮಾನದ ಬದುಕಿಗೆ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 'ಬ್ರಹ್ಮಶ್ರೀ ನಾರಾಯಣಗುರು 169ನೇ ಜನ್ಮ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಪೊಲೀಸ್ ಸಹಾಯಕ ಕಮಿಷನರ್ ಮಹೇಶ ಕುಮಾರ್, ಸಿಬಿಐ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಶುಭ ಹಾರೈಸಿದರು.
ಇದೇ ವೇಳೆ ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಇವರಿಗೆ ಸನ್ಮಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು
ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕೋಶಾಧಿಕಾರಿ ಆನಂದ ಸಾಲ್ಯಾನ್, ಜತೆ ಕಾರ್ಯದರ್ಶಿ ರಾಜೇಶ ಸುವರ್ಣ, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ ರಾಜೇಶ್, ಯುವವಾಹಿನಿ ಘಟಕ ಅಧ್ಯಕ್ಷ ಹರೀಶ ಕೋಟ್ಯಾನ್ ಕುದನೆ, ಬೇಬಿ ಕುಂದರ್, ಮಹಾಬಲ ಸುವರ್ಣ, ಉಮೇಶ ಸುವರ್ಣ, ಗೋಪಾಲಕೃಷ್ಣ ಸುವರ್ಣ ಮತ್ತಿತರರು ಇದ್ದರು.
ಸಂಘದ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಮೇಶ ಎಂ.ತುಂಬೆ ಸ್ವಾಗತಿಸಿ, ಹೇಮಂತ್ ಕುಮಾರ್ ವಂದಿಸಿದರು. ದಿನೇಶ ಸುವರ್ಣ ಮತ್ತು ಗಣೇಶ ಪೂಂಜರೆಕೋಡಿ ನಿರೂಪಿಸಿದರು.















