ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಬುಧವಾರ( ಆ.3 ರಂದು) ಚಾಲನೆ ನೀಡಲಾಯಿತು.
ದೇವಳದ ತಂತ್ರಿಗಳಾದ ವೆಂಕಟೇಶ್, ಪ್ರಧಾನ ಅರ್ಚಕರಾದ ಮಾಧವ ಭಟ್,ನಾರಾಯಣ ಭಟ್, ಪರಮೇಶ್ವರಭಟ್, ರಾಮ್ ಭಟ್ ಅವರು ದೇವಳದ ಅವರಣದಲ್ಲಿ ದೀಪ ಪ್ರಜ್ವಲನೆಗೈದು ಭಜನಾ ಸಪ್ತಾಹವನ್ನು ಉದ್ಘಾಟಿಸಿದರು.
ಈ ಸಂದರ್ಭ ವಿಷ್ಣುಮೂರ್ತಿ ನಟ್ಟೋಜ, ದೇವಳದ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ,ಮಾಜಿ ಸಚಿವ
ನಾಗರಾಜ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್,ಅನಂತಪದ್ಮನಾಭ ಉಪಾಧ್ಯಾಯ, ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್, ಹಿಮಕರ ರಾವ್, ಮಾಜಿ ತಾ.ಪಂ. ಸದಸ್ಯರಾದ ವೆಂಕಟೇಶ್ ನಾವುಡ, ಯಶವಂತ ಪೂಜಾರಿ,ಬಾಬುರಾವ್, ಗ್ರಾ.ಪಂ.ಸದಸ್ಯ ಲೋಕೇಶ್,ಶ್ರೀರಾಜರಾಜೇಶ್ವರಿ ಭಜನಾಮಂಡಳಿ,ಮಾತೃವಿಭಾಗದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.ಅ.10 ರವರೆಗೆ ಅಖಂಡ ಭಜನಾ ಸಪ್ತಾಹ ನಡೆಯಲಿದೆ.
















