ಬಂಟ್ವಾಳ :ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ಸಹಯೋಗದಲ್ಲಿ ಆಟಿಯ ನೆನಪು ಹಾಗೂ ಸಂಘದ 8ನೇ ವಾರ್ಷಿಕೋತ್ಸವವು ತುಂಬೆ ಶಾರದನಗರದ ಶ್ರೀ ಶಾರದ ಸಭಾಭವನದಲ್ಲಿ ಇತೀಚೆಗೆ ನಡೆಯಿತು.
ಅಧ್ಯಕ್ಷರಾದ ಐತಪ್ಪ ಕುಲಾಲರು ದೀಪ ಬೆಳಗಿಸುವುದರ ಮೂಲಕ ಸದಸ್ಯರಿಗೆ ಹಮ್ಮಿಕೊಳ್ಳಲಾದ ಆಟಿ ತಿಂಗಳಿನ ಒಳಂಗಣ ಆಟಗಳಿಗೆ ಚಾಲನೆ ನೀಡಿದರು.
ವಾರ್ಷಿಕೋತ್ಸವವನ್ನು ಕಳಸೆ ಭತ್ತದಲ್ಲಿ ತೆಂಗಿನ ಹೂ ಅರಳಿಸುವ ಮೂಲಕ ನಾರಾಯಣ ಸಿ ಪೆರ್ನೆ ಅಧ್ಯಕ್ಷರು ಕುಲಾಲ ಸುಧಾರಕ ಸಂಘ ಬಂಟ್ವಾಳ ಇವರು ಉದ್ಘಾಟಿಸಿ ಮಾತನಾಡುತ್ತ ಇಷ್ಟೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಸಮಯಪಾಲನೆ, ಶಿಸ್ತುಬದ್ಧವಾಗಿ ನಡೆಸುತ್ತಾ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನಿಯ ಎಂದು ಹೇಳಿ,ಶೀಘ್ರ ಸಂಘಕ್ಕೆ ಸಭಾಭವನ ನಿರ್ಮಿಸಲು ಪ್ರಾರಂಭಿಸಿ ತನ್ನಿಂದ ಎಲ್ಲಾ ರೀತಿಯ ಸಹಕಾರ ನಿಮಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಂತೋಷ್ ಮರ್ತಾಜೆ ಅಧ್ಯಕ್ಷರು ಕುಲಾಲ ಯುವ ವೇದಿಕೆ ಬಂಟ್ವಾಳ,ರೋಹಿಣಿ ನಿವೃತ್ತ ಜನರಲ್ ಮ್ಯಾನೇಜರ್ ದ ಕ ಜಿಲ್ಲಾ ಎಸ್ ಡಿ ಸಿ ಸಿ ಬ್ಯಾಂಕ್ ಮಂಗಳೂರು, ಶೇಷಪ್ಪ ಮಾಸ್ಟರ್, ಗೌರವಾಧ್ಯಕ್ಷ ನೀಲಪ್ಪ ಸಾಲಿಯಾನ್, ಲಿಂಗಪ್ಪ ಕುಲಾಲ್,ಮಹಿಳಾ ಘಟಕದ ಅಧ್ಯಕ್ಷೆ ಉಮಾ ಲಿಂಗಪ್ಪ ಕುಲಾಲ್ ಭಾಗವಹಿದ್ದರು.
ತುಂಬೆ ಗ್ರಾ. ಪ. ಸದಸ್ಯರಾದ ಕಿಶೋರ್ ರಾಮಲ್ ಕಟ್ಟೆ, ಅರುಣ್ ಕುಮಾರ್ ಗಾಣದಲಚ್ಚಿಲ್ ಇವರನ್ನು ಸನ್ಮಾನಿಸಲಾಯಿತು.
ಈ
ಸಂದರ್ಭದಲ್ಲಿ ಒಟ್ಟು 8 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದಲ್ಲದೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇದರ ಪೂರ್ಣ ವೆಚ್ಚವನ್ನು ವಿಜಯಲಕ್ಷ್ಮಿ ಸದಾನಂದ್ ದುಬೈ ಭರಿಸಿದ್ದರು.
ಶ್ರೀಮತಿ ಸೌಮ್ಯ ದಿವಾಕರ್ ಪ್ರಾರ್ಥಿಸಿದರು. ಭಾಸ್ಕರ್ ಕುಲಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಕುಲಾಲ್ ವರದಿ ಮಂಡಿಸಿದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಭಾರತಿ ಶೇಷಪ್ಪ ಆಟೋಟ ಹಾಗೂ ಮನೋರಂಜನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಕೋಶಾಧಿಕಾರಿ ಸದಾನಂದ ವಂದಿಸಿದರು .ಯತೀಕ್ಷಾ ಕಾರ್ಯಕ್ರಮ ನಿರೂ ಪಿಸಿದರು.
ಆಷಾಡ ಮಾಸದ 20 ಕ್ಕಿಂತಲೂ ಹೆಚ್ಚು ಬಗೆಯ ವಿಶೇಷ ತಿಂಡಿ ತಿನಿಸುಗಳನ್ನು ಸದಸ್ಯರೇ ತಯಾರಿಸಿ ತಂದಿದ್ದರು ಅ ಬಳಿಕ ಸಹ ಭೋಜನ ಮಾಡಲಾಯಿತು. 2022-23 ನೆ ಸಾಲಿಗೆ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆರಿಸಲಾಯಿತು.
ವಿಜಯ ಕುಮಾರ್ ಬೊಳ್ಳಾರಿ, ಶಿವಕುಮಾರ್ , ಗೋಪಾಲ್ ಬೆದ್ರಾಡಿ, ಹರೀಶ್ ಪೇರ್ಲ ಬೈಲ್, ನಾಗೇಶ್ ಬೊಲ್ಲಾರಿ, ಕೃಷ್ಣ ಕುಲಾಲ್,ದಿನೇಶ್ ಪೆರ್ಲಬೈಲು,ಕೀರ್ತೇಶ್ ತುಂಬೆ ಪ್ರಿಯಾ ಸತೀಶ್, ಶೋಭಾ ಸದಾನಂದ್, ಶೋಭಾ ಭಾಸ್ಕರ್, ವಸಂತಿ ಕೃಷ್ಣ, ಲತಾಗೋಪಾಲ್, ಮಾಲತಿ ದಿನೇಶ್ ಹಾಗೂ ಸದಸ್ಯರು ಸಹಕರಿಸಿದ್ದರು.

















