Coastal Bulletin

ಬಂಟ್ವಾಳ :ನವೋದಯ ಮಿತ್ರ ಕಲಾ ವೃಂದ (ರಿ)ನೆತ್ತರಕೆರೆ ಇದರ ಆಶ್ರಯದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಕೊಡುಗೆಯಾಗಿ ನೀಡಿದ ಗ್ರಂಥಾಲಯ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್, ಎಂ ಆರ್ ಪಿ ಏಲ್ ನ ಸಿ ಎಸ್ ಆರ್ ಅನುದಾನದಿಂದ ನಿರ್ಮಾಣಗೊಂಡ ಶೌಚಾಲಯ ಕಟ್ಟಡದ ಉದ್ಘಾಟನೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆಯ ಅನಾವರಣ ಕಾರ್ಯಕ್ರಮವು ಜೂ 3 ಭಾನುವಾರ ದ ಕ ಜಿ ಹಿ ಪ್ರಾ ಶಾಲೆ ಕಳ್ಳಿಗೆ ನೆತ್ತರಕೆರೆಯಲ್ಲಿ ನಡೆಯಿತು.

ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮಿಜಿಯವರು, ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಿದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿ ಆಶೀರ್ವಚನ

ನೀಡಿದರು.

ಎಂ ಆರ್ ಪಿ ಏಲ್ ನ ಸಿ ಎಸ್ ಆರ್ ಅನುದಾನದ ಶೌಚಾಲಯ ಕಟ್ಟಡವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಉದ್ಘಾಟಿಸಿದರು.

Leave a Comment