Coastal Bulletin

ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘದ 35ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಇದೇ ದಿನಾಂಕ 07.04.2023ನೇ ಶುಕ್ರವಾರ ಬೆಳಿಗ್ಗೆ ಗಣಹೋಮ, ಮಧ್ಯಾಹ್ನದ ಬಳಿಕ ನಿರಂತರ ಭಜನೆ, ಸಂಜೆ 5.00ಕ್ಕೆ ಪರಮಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರಿಗೆ ಕುಣಿತ ಭಜನೆ ಹಾಗೂ ಪೂರ್ಣ ಕುಂಭ ಸ್ವಾಗತ, ಸಂಜೆ 7.00 ಗಂಟೆಗೆ ಶ್ರೀ ಪೊಳಲಿ ಗಿರಿ ಪ್ರಕಾಶ್ ತಂತ್ರಿ ಇವರ ನೇತೃತ್ವದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ದಿನಾಂಕ 8.04.2023ನೇ ಶನಿವಾರ ಬೊಳ್ಳಾರಿ ಮೈದಾನದಲ್ಲಿ ಆಶೀರ್ವಾದ್ ಸೇವಾ ಸಂಘದ 35ನೇ ವರ್ಷದ ಸಂಭ್ರಮದ ವರ್ಷಾಚರಣೆ ನಡೆಯಲಿದ್ದು, ಅಂದು ಸಂಜೆ 5.00 ರಿಂದ ಅಂಗನವಾಡಿ ಮಕ್ಕಳು ಹಾಗೂ ಪರಿಸರದ ಅರಳು ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7.00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8.00 ರಿಂದ ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘದ ಸದಸ್ಯರು ಮತ್ತು ಸದಸ್ಯೆಯರಿಂದ ನೃತ್ಯ-ಗಾನ-ವೈಭವ

ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.00 ರಿಂದ ಸಂಘದ ಸದಸ್ಯ ಶಶಿಧರ್ ಬೊಳ್ಳಾರಿ ಇವರ ಕಥೆ ಹಾಗೂ ನಿರ್ದೇಶನದ ಮರಪಡಾ... ನೆಂಪು ದೀಲಾ..! ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ತಾವೆಲ್ಲರೂ ಈ ಎರಡು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಶೀರ್ವಾದ್ ಸೇವಾ ಸಂಘ ತುಂಬೆ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಚಾಲಕರು ಹಾಗೂ ಸರ್ವ ಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment