ಬಂಟ್ವಾಳ :ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ರಾಜ್ಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ-2024 ಕಾಲೇಜಿನ ಆವರಣದಲ್ಲಿ ಮೇ 9 ರಿಂದ 11ರವರೆಗೆ ಮೂರು ದಿನಗಳ ವಿವಿಧ ತಾಂತ್ರಿಕ, ಸಾಂಸ್ಕೃತಿಕ ಸ್ಪರ್ಧೆ , ಪ್ರದರ್ಶನಗಳೊಂದಿಗೆ ನಡೆಯಲಿದೆ.
ಯುವ ಜನತೆಯ ಪ್ರತಿಭೆ, ಸೃಜನಶೀಲತೆಗೆ ವೇದಿಕೆಯಾಗಿರುವ ಮೂರು ದಿನಗಳ ಈ ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಆಟೋಟಗಳ ಉತ್ಸವದಲ್ಲಿ ರಾಜ್ಯವ್ಯಾಪಿ ಕಾಲೇಜುಗಳ ಐದು ಸಾವಿರಕ್ಕೂ ಅಧಿಕ ತಾಂತ್ರಿಕ, ಸಾಂಸ್ಕೃತಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯ, ಲಲಿತ ಕಲೆಮ ಕ್ರೀಡೆ, ಆಟಗಳು ಹೀಗೆ ಒಟ್ಟು 56 ಆಕರ್ಷಕ ಸ್ಪರ್ಧಾ ಕಾರ್ಯಕ್ರಮಗಳಿದ್ದು ಪ್ರತಿಭಾನ್ವಿತ, ಯುವ ಕಲಾವಿದರ ಸಂಗಮಕ್ಕೆ ಆಕೃತಿ ವೇದಿಕೆಯಾಗಲಿದೆ. ಮೆಘಾ ಪ್ರೈಮ್ ವಿಭಾಗದಲ್ಲಿ ಮೆರಾಕಿ ಬ್ಯಾಟಲ್ ಆಫ್ ಕ್ರ್ಯೂ, ಗಲ್ಲಿ ಕ್ರಿಕೆಟ್, ವೈಬ್
, ಸ್ಮ್ಯಾಶ್ ಇಟ್ ವಿಶೇಷ ಗಮನ ಸೆಳೆಯಲಿವೆ. ಹ್ಯಾಕಥಾನ್ , ಶಾರ್ಕ್ ಟ್ಯಾಂಕ್ , ಪ್ರೊ ನೈಟ್, ಮೊದಲಾದ ಆಕರ್ಷಕ ಸ್ಪರ್ಧೆಗಳ ಜತೆಗೆ ವೈವಿಧ್ಯಮಯ ಕಾರುಗಳ ಅಟೋ ಎಕ್ಸಪೋ, ಅರ್ಟ್ ಎಕ್ಸಿಬಿಶನ್ ಸೇರಿದಂತೆ ಸಾಂಸ್ಕೃತಿಕ , ಚೆಂಡೆ ಮೇಳ ಇತ್ಯಾದಿ ಕಾರ್ಯಕ್ರಮಗಳ ಆಕರ್ಷಣೆಯಿದೆ.
ರಾಜ್ಯಮಟ್ಟದ ಈ ಅಂತರ್ ಕಾಲೇಜು ಉತ್ಸವಕ್ಕೆ ಕಾಲೇಜಿನ ಆವರಣವನ್ನು ಆಕರ್ಷಕವಾಗಿ ಸಜ್ಜುಗೊಳಿಸಲಾಗುತ್ತಿದ್ದು ಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಕಲೋತ್ಸವಕ್ಕೆ ಸಜ್ಜಾಗುತ್ತಿರುವ ಆವರಣ ಹೆಚ್ಚಿನ ರಂಗೇರಿಸಿದ್ದು ಅಬ್ಬರದ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.









