Coastal Bulletin

ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಭಜನಾ ಮಂದಿರ ಪೆರ್ಮಂಕಿ ಇದರ ಪ್ರತಿಷ್ಠಾವರ್ಧಂತಿ ಉತ್ಸವ , ರಜತ ಮಹೋತ್ಸವ ಹಾಗೂ ಬ್ರಹ್ಮ ಶ್ರೀ ಬೆಳ್ಳಿ ಹೆಜ್ಜೆ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಎ.7 ರಿಂದ 8 ರವರೆಗೆ ನಡೆಯಲಿದೆ.

ಎ.7 ರಂದು ಸಂಜೆ 5.30 ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಶಾವತಾರ ಎಂಬ ಯಕ್ಷಗಾನ ಬಯಲಾಟ ಇರಲಿದೆ. ನಂತರ ಅನ್ನಸಂತರ್ಪಣೆ ಇದೆ.

ಈ ಸಂದರ್ಭದಲ್ಲಿ ಸಂಜೆ 4.30ಯಿಂದ ಶ್ರೀ ಗುರು ಚೆಂಡೆ ಬಳಗದವರು ಶ್ರೀ ನಾರಾಯಣ ಗುರುಗಳಿಗೆ ಅರ್ಪಿಸುವ ರಜತ ಪ್ರಭಾವಳಿಯ ಭವ್ಯ ಮೆರವಣಿಗೆಯು ಹಸಿರು ಹೊರೆ ಕಾಣಿಕೆಯೊಂದಿಗೆ ಶ್ರೀ ಸದಾಶಿವ ದೇವಸ್ಥಾನದಿಂದ ಶ್ರೀ ಗುರು ಮಂದಿರಕ್ಕೆ ಬರಲಿದೆ. 

ಎ.8 ರಂದು ಮಧ್ಯಾಹ್ನ 1 ಗಂಟೆಗೆ ಮಹಾ

ಅನ್ನಸಂತರ್ಪಣೆ ಜರಗಲಿದೆ. ನಂತರ 3.00ರಿಂದ 7.00 ರವರೆಗೆ ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಸರಿಯಾಗಿ ಮಹಾಪೂಜೆ ಇರಲಿದೆ. ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. ರಾತ್ರಿ 8.30 ಕ್ಕೆ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ 9.00 ಗಂಟೆಗೆ ಮಂಗಳೂರು ರಾಜಶ್ರೀ ತಂಡದವರಿಂದ ಕುಸಲ್ದ ಎಸಲ್ ಎಂಬ ಹಾಸ್ಯ ಕಾರ್ಯಕ್ರಮ ಇರಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment