ಬಂಟ್ವಾಳ:ಸಮಾಜದಲ್ಲಿ ತಾನು ಗಳಿಸಿದ ಆದಾಯದಲ್ಲಿ ಒಂದು ಭಾಗ ಸಮಾಜಕ್ಕೆ ಮೀಸಲಿಡುವ ಮೂಲಕ ಜನತೆಗೆ ಸ್ಪಂದಿಸಿದಾಗ ಜೀವನದಲ್ಲಿ ಮನಶಾಂತಿ ಜೊತೆಗೆ ಗೆಲುವು ಸಾಧ್ಯವಾಗುತ್ತದೆ ಎಂದು ಮಂಗಳೂರು ಜವಾಹರ್ ಬಾಲ್ ಮಂಚ್ ಸಂಸ್ಥೆ ಅಧ್ಯಕ್ಷೆ ಶೈಲಜಾ ರಾಜೇಶ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಬಾಳ್ತಿಲ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಮಂಗಳೂರು ಜವಾಹರ್ ಬಾಲ್ ಮಂಚ್ ಸಂಸ್ಥೆ ಸಹಭಾಗಿತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗೆ ಛದ್ಮವೇಷ, ಮೆಹಂದಿ, ಬೆಂಕಿ ರಹಿತ ಅಡುಗೆ, ಚಿಕತ್ರಕಲೆ, ಜಾನಪದ ನೃತ್ಯ ಸ್ಪರ್ಧೆ ನಡೆಯಿತು.
ವಿವಿಧ ಕ್ಷೇತ್ರದ ಸಾಧಕಿಯರಾದ ಶಶಿಕಲಾ ಆರ್.ಸೋಮಯಾಜಿ, ಸಂಗೀತ ಶರ್ಮ, ಡಾ.ಸಂಶಾದ್ ಕುಂಜತ್ತಬೈಲು, ಪ್ರಭಾ ನಾರಾಯಣ ಸುವರ್ಣ ಇವರಿಗೆ 'ಗಿರಿಜಾ ರತ್ನ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಮಾಜಿ ಸಚಿವ
ಬಿ ರಮಾನಾಥ ರೈ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ವಕೀಲ ಅಶ್ವನಿ ಕುಮಾರ್ ರೈ ಶುಭ ಹಾರೈಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಉದ್ಯಮಿ ಶೈಲೇಂದ್ರ ಸುವರ್ಣ, ಮಕ್ಕಳ ಒಕ್ಕೂಟ ಅಧ್ಯಕ್ಷ ಶೌರ್ಯ ಎಸ್.ಆರ್., ಪ್ರಮುಖರಾದ ಕೃಷ್ಣ ಸುವರ್ಣ, ಡಾ.ರಾಜೇಶ್ ಮತ್ತಿತರರು ಇದ್ದರು.
ಸಂಸ್ಥೆ ಅಧ್ಯಕ್ಷೆ ಶೈಲಜಾ ರಾಜೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಯತೀಶ್ ಶಂಭೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.














