ಮಂಗಳೂರು: ಅಮೆರಿಕಾ ವರ್ಷಕ್ಕೆ ಲಕ್ಷ ಇಂಜಿನಿಯರಿಂಗ್ ಪದವೀಧರರನ್ನು ಸೃಷ್ಟಿಸಿದರೆ ಭಾರತದಲ್ಲಿ ಈ ಸಂಖ್ಯೆ 15 ಲಕ್ಷ ಮೀರುತ್ತದೆ. ಬರೇ ಪದವಿಯಿಂದ ಯಶಸ್ಸು ಸಾಧ್ಯವಿಲ್ಲ. ವೃತ್ತಿ ಜೀವನದ ಸವಾಲು, ಸ್ಪರ್ಧಾತ್ಮಕತೆಗೆ ಸನ್ನದ್ಧರಾದಾಗ, ನಿರಂತರ ಕಲಿಕೆಗೆ ಆಸಕ್ತರಾದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಸತತ ಪರಿಶ್ರಮ, ಬದ್ಧತೆ, ಕೃತಜ್ಞತೆಯ ಮನೋಭಾವವಿದ್ದಾಗ ಯಶಸ್ಸು, ಸಂಪತ್ತು ನಮ್ಮನ್ನು ಹಿಂಬಾಲಿಸುತ್ತದೆ ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ , ಉದ್ಯಮಿ, ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಹೇಳಿದರು.
ನಗರದ ಟಿ.ವಿ.ರಮಣ್ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಶನಿವಾರ ಜರಗಿದ ಕೆನರಾ ಇಂಜಿನಿಯರಿಂಗ್ ಕಾಲೇಜಿನ 20 ನೇ ಬ್ಯಾಚಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಯೋಗಿಗಳಾಗುವುದು ಎಲ್ಲರ ಕನಸಾಗಿದೆ. ಆದರೆ ಉದ್ಯೋಗ ನೀಡುವವರಾಗುವ ನಿಟ್ಟಿನಲ್ಲೂ ವಿಪುಲ ಅವಕಾಶಗಳ ಸವಾಲನ್ನೂ ಸ್ವೀಕರಿಸಲು ಪದವೀಧರರು ಮುಂದಾಗಬೇಕು ಎಂದವರು ಹೇಳಿದರು.
ಕಾಲೇಜಿನ ಸಂಚಾಲಕ, ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮಾತನಾಡಿ ಕೆನರಾ ಸಂಸ್ಕೃತಿಯೊಂದಿಗೆ ಬೆಳೆದ ಪದವೀಧರರಿಗೆ ಉಜ್ವಲ ಭವಿಷ್ಯವಿದೆ. ಹೆತ್ತವರ ಕನಸೀಗ ನನಸಾಗಿದೆ. ಮುಂದೆ ಉದ್ಯಮರಂಗದಲ್ಲೂ ಯಶಸ್ಸು, ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.
ಕಾಲೇಜಿನ ಉಪ ಪ್ರಾಂಶುಪಾಲ, ಅಕಾಡೆಮಿಕ್ ಡೀನ್ ಡಾ. ಡೇಮಿಯನ್ ಎ. ಡಿಮೆಲ್ಲೋ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಉಪಾಧ್ಯಕ್ಷ ಕೆ.ಸುರೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹೆತ್ತವರ ತ್ಯಾಗ, ಶಿಕ್ಷಕರ ಸಹಕಾರ, ಕಲಿತ ಸಂಸ್ಥೆಯ ಕೊಡುಗೆಯನ್ನು ಪದವೀಧರರೆಂದೂ ಮರೆಯಬಾರದು ಎಂದರು.
ವಿದ್ಯಾರ್ಥಿಗಳಾದ ವಿಜಯರಾಜ್ ಪೈ ಗಿರಿಧರ ಕಿಣಿ,ಎಸ್
ಸಂಜನಾ ಪೈ,ಅಕ್ಷಯ್ ಅನಿಸಿಕೆ ವ್ಯಕ್ತಪಡಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಸದಸ್ಯೆ ಅಶ್ವಿನಿ ಕಾಮತ್ , ವಿಶೇಷ ಆಹ್ವಾನಿತ
ಗಿರಿಧರ್ ಕಾಮತ್ ಆಡಳಿತ ಕೌನ್ಸಿಲ್ ಸದಸ್ಯ ವಿನಾಯಕ ಕಾಮತ್ ಕಾಲೇಜಿನ ಡೀನ್ ಎಕ್ರೆಡಿಟೇಶನ್ ಡಾ. ವೆಂಕಟೇಶ್ ಎನ್., ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಸುನೀಲ್ ಕುಮಾರ್ ಬಿ.ಎಲ್, ಇನ್ಫರ್ಮೇಶನ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಹೆಚ್.ಮನೋಜ್ ಗಡಿಯಾರ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಡಾ. ದಯಾನಂದ್ ಜಿ.ಕೆ. ಸಮಾರಂಭದ ಮುಖ್ಯ ಸಮನ್ವಯಕಾರರಾದ ಜಯಶ್ರೀ ಕೆ. ಅನಂತ ಕೃಷ್ಣ ಕಾಮತ್ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸ್ವಾಗತಿಸಿದರು.
ಸಹ ಪ್ರಾಧ್ಯಾಪಕಿ ಕ್ಯಾರಲ್ ಡಿ.ಮೆಲ್ಲೋ ಸಾದಕ ವಿದ್ಯಾರ್ಥಿಗಳು, ಪದವಿಧರ ವಿದ್ಯಾರ್ಥಿಗಳ ವಿವರ ನೀಡಿ ವಂದಿಸಿದರು. ನೇಮಕಾತಿ, ತರಬೇತಿ ವಿಭಾಗ, ಹಳೆ ವಿದ್ಯಾರ್ಥಿ ಸಂಪರ್ಕ ಮುಖ್ಯಸ್ಥೆ ದೀಪ್ತಿ ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು









