Coastal Bulletin

ಮೂಡುಬಿದಿರೆ: ಸತ್ಯ ಮತ್ತು ಸತ್ವಪೂರ್ಣ ಮಾಹಿತಿಗಳು ಮಾಧ್ಯಮಗಳಲ್ಲಿ ಬರಬೇಕು. ಸುದ್ದಿಗಳನ್ನು ಪರಿಶೀಲನೆಯ ಬಳಿಕ ಸಮರ್ಪಿಸುವುದರ ಜತೆಗೆ ಸಮಾಜಮುಖೀ ಮಾಹಿತಿಗಳ ಮೂಲಕ ಮಾಧ್ಯಮ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕು. ಎಂದು ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.

ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಶುಕ್ರವಾರ ಸಮಾಜ ಮಂದಿರದಲ್ಲಿ ಜರಗಿದ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿ ಉಪನ್ಯಾಸ ನೀಡಿದ ಪತ್ರಕರ್ತ ವಸಂತ ಗಿಳಿಯಾರು ಮಾತನಾಡಿ, ನಕಾರಾತ್ಮಕ ಸುದ್ದಿಗಳತ್ತ ಒಲವು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಪತ್ರಕರ್ತರು ಮುಲಾಜಿಗೆ ಬಿದ್ದು ನೈಜ್ಯತೆ ಕಾಯ್ದುಕೊಂಡು ಬದುಕುವುದೇ ಸವಾಲಾಗಿದೆ ಎಂದರು. ನಿಭರ್ೀತ ಮತ್ತು ನೈಜ್ಯ ಪತ್ರಿಕೋದ್ಯಮಕ್ಕೆ ಮಾದರಿಯಂತಿದ್ದ ವಡ್ಡರ್ಸೆ ರಘುರಾಮ ಶೆಟ್ಟರು, ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ಅವರ ಹೆಸರಲ್ಲಿ ರಾಜ್ಯ ಸರಕಾರವೇ ಪ್ರಶಸ್ತಿಯನ್ನು ನೀಡುವಂತಾಗಬೇಕು ಎಂದರು.

ಸಂಮಾನ, ಗೌರವ: ಹಿರಿಯ ಸಾಹಿತಿ ಎಂ.ಡಿ. ಇಂದ್ರ, ಜಾನಪದ ಕ್ಷೇತ್ರದ ಸಾಧಕ ವೆಂಕಟೇಶ ಬಂಗೇರ, ಶೈಕ್ಷಣಿಕ ಸಾಧಕರಾದ ಅದ್ವಿತಿ ಪಿ.ಹೆಗ್ಡೆ, ಭಕ್ತಿಶ್ರೀ, ಭುವನ್ದೀಪ್ ಆಚಾರ್, ಎಂ. ಸುಧೀಂದ್ರ ಕಾಮತ್ ಅವರನ್ನು ಗೌರವ ಸಂಮಾನದೊಂದಿಗೆ ಪುರಸ್ಕರಿಸಲಾಯಿತು. ಸಂಮಾನಿತ ಎಂ.ಡಿ ಇಂದ್ರರ ಪರವಾಗಿ ಪುತ್ರ ಸುಖರಾಜ್ ಇಂದ್ರ ಅನಿಸಿಕೆ ವ್ಯಕ್ತಪಡಿಸಿದರು. ಟೀವಿಯಲ್ಲಿ ಕಂಡದ್ದಕ್ಕಿಂತ ಪತ್ರಿಕೆಯಲ್ಲಿ ಬಂದದ್ದು ನಿಜ ಎನ್ನುವ ಭಾವನೆ ಎಲ್ಲರಲ್ಲಿರುವುದರಿಂದ ಪತ್ರಿಕೆಗಳ ಜವಾಬ್ದಾರಿ ಹೆಚ್ಚಿದೆ ಎಂದು ಭಕ್ತಿಶ್ರೀ ಅಭಿಪ್ರಾಯಪಟ್ಟರು.

ಪ್ರೆಸ್ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವರದಿಗಾರಿಕೆ ಸವಾಲಿನದ್ದು ಆದರೆ ಘನತೆಯ ವೃತ್ತಿಯಾಗಿದೆ. ಅಧಿಕಾರಿಗಳ ದರ್ಪ,

ಜನಪ್ರತಿನಿಧಿಗಳನ್ನು

ಹತೋಟಿಯಲ್ಲಿರಿಸುವಲ್ಲಿ ಮಾಧ್ಯಮದ ಕೊಡುಗೆ ಮಹತ್ವದ್ದಾಗಿದೆ ಎಂದರು. ಕಾರ್ಯದಶರ್ಿ ಶರತ್ ದೇವಾಡಿಗ ಉಪಸ್ಥಿತರಿದ್ದರು.

ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪತ್ರಕರ್ತ ಧನಂಜಯ ಮೂಡುಬಿದಿರೆ ಸಮ್ಮಾನಿತರನ್ನು ಪರಿಚಯಿಸಿ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೆಸ್ಕ್ಲಬ್ ಉಪಾಧ್ಯಕ್ಷ ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿ ಕೋಶಾಧಿಕಾರಿ ಎಂ. ಗಣೇಶ್ ಕಾಮತ್ ವಂದಿಸಿದರು.

ಮುಂದಿನ ವರ್ಷದೊಳಗೆ ಪತ್ರಿಕಾ ಭವನ!

ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ಕಂಡಿದ್ದ ಮೂಡುಬಿದಿರೆಯ ಪತ್ರಿಕಾ ಭವನದ ಕಾಮಗಾರಿಗೆ ಶುಕ್ರವಾರ ಮುಂಜಾನೆ ಪತ್ರಿಕಾ ದಿನಾಚರಣೆಯ ಸುಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಒಂದು ವರ್ಷದೊಳಗಾಗಿ ಮಾದರಿ, ಸುಸಜ್ಜಿತ ಪತ್ರಿಕಾಭವನ ನಿರ್ಮಾಣವಾಗಲಿದೆ. ಜನತೆಯ ಸಹಯೋಗದ ಜತೆಗೆ ಜನಪ್ರತಿನಿಧಿಯಾಗಿ ಪತ್ರಿಕಾಭವನಕ್ಕೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು.

ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಮಂಗಳೂರು ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪ್ರೆಸ್ಕ್ಲಬ್ ಸ್ಥಾಪಕಾಧ್ಯಕ್ಷ ರೇಮಂಡ್ ತಾಕೋಡೆ, ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ , ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರ.ಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಬಿ.ಜಗದೀಶ್, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ಶೇಖರ ಅಜೆಕಾರು ಮೂಡುಬಿದಿರೆ ಪ್ರೆಸ್ ಕ್ಲಬ್ ಸದಸ್ಯರು, ನಿರ್ವಾಹಕಿ ದೀಪ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment