ಬಂಟ್ವಾಳ :ಸಜಿಪ ನಾಲ್ಕೈತ್ತಾಯ ದೈವಂಗಳ ಗಡಿಪ್ರಧಾನರು, ಸಜಿಪ ಮಂಡಲ ಪಂಚಾಯತ್ ನ ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಕ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರ ತೀರ್ಥರೂಪರಾದ ಸಜಿಪಗುತ್ತು ಮುಂಡಪ್ಪ ಶೆಟ್ಟಿ ಯಾನೆಕೋಚು ಭಂಡಾರಿ (90) ವಯೋಸಹಜ ಕಾಯಿಲೆಯಿಂದ, ಮೇ 2ರಂದು ಗುರುವಾರ ನಿಧನ ಹೊಂದಿದರು. ಮೃತರು ಪತ್ನಿ ,ಮೂರು ಹೆಣ್ಣು ಮಕ್ಕಳು, ಒಬ್ಬ ಮಗ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.









