ಬಂಟ್ವಾಳ: ಶ್ರೀ ರಕ್ಷೆಶ್ವರಿ ದೇವಿ ಸನ್ನಿಧಿ ಬಿ.ಸಿ.ರೋಡ್ ಇದರ ತ್ರೈ ವಾರ್ಷಿಕ ಮಹಾಸಭೆಯು ಶ್ರೀ ರಕ್ತಶ್ವರಿ ದೇವಿ ಸನ್ನಿಧಿ ವಠಾರದಲ್ಲಿ ಬಿ.ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸೇವಾ ಸಮಿತಿ ಅಧ್ಯಕ್ಷರಾಗಿ ಬಿ.ಮೋಹನ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ
(ಗುರುಕೃಪಾ), ಪ್ರಧಾನ ಕಾರ್ಯದರ್ಶಿಯಾಗಿ ಎನ್.ಶಿವಶಂಕರ್, ಕೋಶಾಧಿಕಾರಿಯಾಗಿ ರಾಜೇಶ್.ಎಲ್.ನಾಯಕ್, ಜತೆ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.












