ಬಂಟ್ವಾಳ: ಮುಂಬೈನ ಪತ್ರಕರ್ತೆ ವಾಣಿ ರಘುನಾಥ್ ಮುಂಬೈ ಇವರು ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಂಗಳೂರು ಕಥಾಬಿಂದು ಪ್ರಕಾಶನ ಸಂಸ್ಥಾಪಕ ಪಿ.ವಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕೋದ್ಯಮ ಪದವೀಧರೆಯಾಗಿರುವ ವಾಣಿ ಅವರು ಆರಂಭದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಸಂಪಾದಕತ್ವದ ಪತ್ರಿಕೆಯೊಂದರ ಸುದ್ದಿ ಸಂಪಾದಕಿಯಾಗಿ, ಮುಂಬೈ ಕನರ್ಾಟಕ ಮಲ್ಲ ಸಹಿತ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ, ಅಂಕರಣಕಾರರಾಗಿ ಗುರುತಿಸಿಕೊಂಡಿದ್ದಾರೆ.
ಕವಯಿತ್ರಿಯಾಗಿ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಕಾವ್ಯಶಿರೋಮಣಿ ಪ್ರಶಸ್ತಿ ಗಳಿಸಿದ್ದರು. ಉತ್ತಮ ಕಾರ್ಯಕ್ರಮ ನಿರೂಪಕಿಯಾದ ಇವರಿಗೆ 'ಇಂಟರ್ ನ್ಯಾಶನಲ್ ಹ್ಯೂಮನ್ ಡೆವಲಪ್ ಮೆಂಟ್ ಕೌನ್ಸಿಲ್' ವತಿಯಿಂದ 'ಎಚಿವರ್ಸ್ ಅವಾರ್ಡ್ '
ಲಭಿಸಿದೆ. ಮುಂಬೈ ಮಹಿಳಾ ಸಾಹಿತ್ಯ ಸಂಘ, ತುಳು ಕೂಟ, ವಿರಾರ್ ಕನರ್ಾಟಕ ಸಂಸ್ಥೆ ಸಹಿತ ಭರತನಾಟ್ಯ ಮತ್ತು ನಾಟಕ ಕಲಾವಿದರಾಗಿಯೂ ಮಿಂಚಿದ್ದಾರೆ.
ಜ.4ರಂದು ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಧರ್ಮದರ್ಶಿ ಕೆ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 'ಕನ್ನಡ ರತ್ನ' ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










