ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರ ಆಶ್ರಯದಲ್ಲಿ ಜ.ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ , ಎ.ಬಿ.ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆಯಿಂದ ಪ್ರತಿ ಮಂಗಳವಾರ ನಡೆಯುವ 694 ನೇ ಉಚಿತ ಕಣ್ಣು- ದಂತ- ವೈದ್ಯಕೀಯ ಶಿಬಿರವು ಡಿ.6 , 13, 20, 27 ರಂದು ಬೆಳಗ್ಗೆ 9ರಿಂದ 1 ಗಂಟೆಯವರೆಗೆ ನಡೆಯಲಿದೆ.
ಈ ಶಿಬಿರವು ಫರಂಗಿಪೇಟೆ , ಸೇವಾಂಜಲಿ ಆರೋಗ್ಯ ಕೇಂದ್ರದಲ್ಲಿ ನಡೆಯಲ್ಲಿದ್ದು, ಕಣ್ಣಿನ ತಜ್ಞ ವೈದ್ಯರು, ದಂತ ತಜ್ಞ ವೈದ್ಯರು, ಸಾಮಾನ್ಯ ರೋಗ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ಚರ್ಮ ರೋಗ ತಜ್ಞ ವೈದ್ಯರು, ಸ್ತ್ರೀ ರೋಗ ತಜ್ಞ
ವೈದರು, ಕಿವಿ, ಮೂಗು, ಗಂಟಲು ತಜ್ಞ ವೈದ್ಯರು ಭಾಗವಹಿಸುತ್ತಾರೆ.
ಈ ಶಿಬಿರದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ ಎಂದು ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















