ಬಂಟ್ವಾಳ :ಸೆ.2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ.

Coastal Bulletin
ಬಂಟ್ವಾಳ :ಸೆ.2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ.

ಬಂಟ್ವಾಳ, ಆ. 31: ದ.ಕ. ಜಿಲ್ಲೆಯಾದ್ಯಂತ ಸೆ. 2ರಿಂದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ದ.ಕ.ಜಿಲ್ಲೆಯ ಸ್ಥಿರಾಸ್ತಿಯನ್ನು ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಬಹುದಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಬಂಟ್ವಾಳ ಉಪನೋಂದಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment