ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ10 ವಿಟಿಯು ರಾಂಕ್, ಅಮೋಘ ಸಾಧನೆ. ಸಿ.ಎಸ್.ಬಿ.ಎಸ್ ವಿಭಾಗದಲ್ಲಿ ನಿಖಿತಾ ಗಣಪತಿ ಭಟ್‌ಗೆ ಪ್ರಥಮ ರಾಂಕ್, ಚಿನ್ನದ ಪದಕ.

Coastal Bulletin
ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ10 ವಿಟಿಯು ರಾಂಕ್, ಅಮೋಘ ಸಾಧನೆ. ಸಿ.ಎಸ್.ಬಿ.ಎಸ್ ವಿಭಾಗದಲ್ಲಿ ನಿಖಿತಾ ಗಣಪತಿ ಭಟ್‌ಗೆ ಪ್ರಥಮ ರಾಂಕ್, ಚಿನ್ನದ ಪದಕ.

ಮಂಗಳೂರು: ಕಳೆದ ಮೇ ತಿಂಗಳಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲವು ನಡೆಸಿದ ಅಂತಿಮ ಬಿ.ಇ. ಪರೀಕ್ಷೆಯಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹತ್ತು ರಾಂಕ್ ತಮ್ಮದಾಗಿಸಿಕೊಂಡಿದ್ದಾರೆ.

ಸಿ.ಎನ್.ಬಿ.ಎಸ್ ಇಂಜಿನಿಯರಿಂಗ್ ವಿಭಾಗದ ನಿಖಿತಾ ಗಣಪತಿ ಭಟ್ ಪ್ರಥಮ ರಾಂಕ್ ಸಹಿತ ಚಿನ್ನದ ಪದಕ ವಿಜೇತರಾಗಿದ್ದಾರೆ. ಸಿಎಸ್.ಬಿ.ಎಸ್. ವಿಭಾಗದಲ್ಲಿ ಪ್ರಥಮ, ತೃತೀಯ, ಐದು,ಅರು, ಎಂಟು ಮತ್ತು ಒಂಭತ್ತನೆಯ ಹೀಗೆ 6 ರಾಂಕುಗಳು ಕೆನರಾ ಇಂಜಿನಿಯರಿಂಗ್ ಪಾಲಾಗಿವೆ.

ಕಂಪ್ಯೂಟರ್ ಸೈನ್ಸ್ ಡಿಸೈನ್ ವಿಭಾಗದಲ್ಲಿ 3 ರಾಂಕುಗಳು ಹಾಗೂ ಎಐಎಂಎಲ್ ವಿಭಾಗದಲ್ಲಿ 1 ಹೀಗೆ ಒಟ್ಟು ಹತ್ತು ರಾಂಕುಗಳೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ದಾಖಲಿಸಿದ್ದಾರೆ. 

ಇದೀಗ ರಜತ ಮಹೋತ್ಸವ ಸಂಭ್ರಮಕ್ಕೆ ಅಡಿಯಿಡುತ್ತಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 2021ರಲ್ಲಿ ಆರಂಭಗೊಂಡಿದ್ದ ಮೂರು ಹೊಸ ಇಂಜಿನಿಯರಿಂಗ್ ವಿಭಾಗಗಳ ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಂದ ಈ ಭರ್ಜರಿ ದಾಖಲೆ ಮೂಡಿಬಂದಿದೆ.

ಕಂಪ್ಯೂಟರ್ ಸೈನ್ಸ್ ಅಂಡ್ ಬ್ಯುಸಿನೆಸ್ ಸಿಸ್ಟಮ್ ಇಂಜಿನಿಯರಿಂಗ್ ( ಸಿ.ಎಸ್.ಬಿ.ಎಸ್) ವಿಭಾಗದಲ್ಲಿ ಹಿಮಾಂಶು (ತೃತೀಯ) ನಿಖಿಲ್ ಪೈ (ಐದನೇ) ಕು.ರಕ್ಷಿತಾ ಎ.ಭಕ್ತಾ (ಆರನೇ) ಕು.ಶ್ರಾವ್ಯ ಕೆ. (ಎಂಟನೇ) ಹಾಗೂ ಸ್ವೀಡೆಲ್

ಲಾರೆನ್ಸ್ ಡಿ ಸೋಜಾ (ಒಂಭತ್ತನೇ) ರಾಂಕ್ ಪಡೆದಿದ್ದಾರೆ.

ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್ ಇಂಜಿನಿಯರಿಂಗ್ (. ಸಿ.ಎಸ್.ಡಿವ) ವಿಭಾಗದಲ್ಲಿ ಕು.ಶ್ವೇತಾ ರವೀಂದ್ರ ಬಾಳಿಗಾ (ಐದನೇ) ಕು.ಅದಿತಿ ಎನ್. (ಆರನೇ) ಹಾಗೂ ಕು.ನವ್ಯ ( ಹತ್ತನೇ) ರಾಂಕ್ ಪಡೆದಿದ್ದಾರೆ.

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಶಿನ್ ಲರ್ನಿಂಗ್ ಇಂಜಿನಿಯರಿಂಗ್ (ಎಐಎಂಎಲ್) ವಿಭಾಗದಲ್ಲಿ ಆಶಯ್ ಶೆಟ್ಟಿ ಹತ್ತನೇ ರಾಂಕ್ ವಡೆದಿದ್ದಾರೆ.

ಒಟ್ಟು ಏಳು ಇಂಜಿನಿಯರಿಂಗ್ ವಿಭಾಗಗಳೊಂದಿಗೆ ಈಗಾಗಲೇ ಎನ್.ಬಿ.ಎ., ನ್ಯಾಕ್, ಐಎಸ್.ಒ ಮಾನ್ಯತೆ ಪಡೆದಿರುವ ಕೆನರಾ ಇಂಜಿನಿಯರಿಂಗ್ ಕಾಲೇಜು ಕಳೆದ ಎರಡೂವರೆ ದಶಕಗಳ ತನ್ನ ಸಾಧನೆಯ ಹಾದಿಯಲ್ಲಿ ಇದೇ ಮೊದಲ ಬಾರಿಗೆ ಹತ್ತು ರಾಂಕುಗಳ ಸಾಧನೆ ಮಾಡಿದೆ. ಕಾಲೇಜು ಆಡಳಿತ ಮಂಡಳಿಯ ಪರವಾಗಿ ಸಂಚಾಲಕ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಕಾಲೇಜು ಪ್ರಾಂಶುಪಾಲ ಡಾ.ನಾಗೇಶ್ ಹೆಚ್. ಆರ್. ವಿದ್ಯಾರ್ಥಿಗಳನ್ನು ಈ ಅನನ್ಯ ಸಾಧನೆಗಾಗಿ ಅಭಿನಂದಿಸಿದ್ದಾರೆ.

Leave a Comment