ನಾವೂರ: ಸರ್ಕಾರಿ ಶಾಲೆಯಲ್ಲಿ ಉಚಿತ ಇಂಗ್ಲಿಷ್ ತರಬೇತಿ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ. ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯ :ಅರ್ಜುನ್ ಭಂಡಾರ್ಕರ್.

Coastal Bulletin
ನಾವೂರ: ಸರ್ಕಾರಿ ಶಾಲೆಯಲ್ಲಿ ಉಚಿತ ಇಂಗ್ಲಿಷ್ ತರಬೇತಿ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ. ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯ :ಅರ್ಜುನ್ ಭಂಡಾರ್ಕರ್.

ಬಂಟ್ವಾಳ :ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯ ಎಂದು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರಾದ ಅರ್ಜುನ್ ಭಂಡಾರ್ಕರ್ ನುಡಿದರು.

ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿನಲ್ಲಿ ಮಾತೃಭೂಮಿ ಸೇವಾ ಸಂಘ ನಾವೂರು ಇವರ ವತಿಯಿಂದ ಆರಂಭಗೊಳ್ಳಲಿರುವ ಉಚಿತ ಇಂಗ್ಲಿಷ್ ತರಬೇತಿ ವಿಭಾಗ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿದರು.ಈ ಸಮಯದಲ್ಲಿ ಶಾಲೆಗೆ ಎರಡು ಕಂಪ್ಯೂಟರ್ ಗಳನ್ನು ನೀಡುವುದಾಗಿ ಭರವಸೆ ‌ನೀಡಿದರು.

ನೀಡಿದರು.ಉದ್ಯಮಿಗಳಾದ ‌ಸುಂದರ ಕೊಡಂಗೆ ಇವರು ಅಧ್ಯಕ್ಷತೆ ವಹಿಸಿದ್ದರು. ಯುವ ಶಕ್ತಿ

‌ಸೇವಾ ಪಥದ ಕಾರ್ಯನಿರ್ವಹಕ ವಿಭಾಗ ಸದಸ್ಯರಾದ  ಗಣೇಶ್ ಕೆದಿಲ,ಮಾತೃಭೂಮಿ ಸೇವಾ ಸಂಘದ ಅಧ್ಯಕ್ಷರಾದ  ಸಂತೋಷ್ ಕೋಟ್ಯಾನ್ ಎಕ್ಕುಡೇಲು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರು ಸುನೀತಾ ಭಾಯಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್  ಉಪಸ್ಥಿತಿ ಇದ್ದರು. ಶಾಲೆಯ ಮಕ್ಕಳು ಪ್ರಾರ್ಥಿಸಿದರು

ಸಂಘದ ಸ್ಥಾಪಕರು ಹಾಗೂ ನಿರ್ದೇಶಕರಾದ ಸುರೇಶ್ ಎಸ್.ನಾವೂರು ಸ್ವಾಗತ ಹಾಗೂ ಧನ್ಯವಾದ ನೀಡಿದರು. ಸಂಘದ ಕಾರ್ಯದರ್ಶಿ ಲೋಹಿತ್ ‌ಕೆ. ಕಾರ್ಯಕ್ರಮ ನಿರೂಪಿಸಿದರು

Leave a Comment