ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರ ಆಶ್ರಯದಲ್ಲಿ ಜ। ಕೆ. .ಎಸ್ ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಎ.ಬಿ. ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇವರ ಸಹಯೋಗದಲ್ಲಿ ತಿಂಗಳಿನ ಪ್ರತಿ ಮಂಗಳವಾರ ನಡೆಯುವ 760ನೇ ಉಚಿತ ಕಣ್ಣು-ದಂತ-ವೈದ್ಯಕೀಯ ಶಿಬಿರ ಏಪ್ರಿಲ್ 2, 9,16, 23, 30 ರಂದು ಬೆಳಿಗ್ಗೆ ಗಂಟೆ 9-00ರಿಂದ 1-00ರ ವರೆಗೆ ಸೇವಾಂಜಲಿ ಆರೋಗ್ಯ ಕೇಂದ್ರ, ಫರಂಗಿಪೇಟೆಯಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸುವ ವೈದ್ಯರು :
ಕಣ್ಣಿನ ತಜ್ಞ ವೈದ್ಯರು, ಸಾಮಾನ್ಯ ರೋಗ ತಜ್ಞ ವೈದ್ಯರು,ದಂತ ತಜ್ಞ ವೈದ್ಯರು,ಚರ್ಮ ರೋಗ ತಜ್ಞ ವೈದ್ಯರು,ಮಕ್ಕಳ ತಜ್ಞ ವೈದ್ಯರು,ಸ್ತ್ರೀ ರೋಗ ತಜ್ಞ ವೈದ್ಯರು,ಕಿವಿ, ಮೂಗು, ಗಂಟಲು ತಜ್ಞ ವೈದ್ಯರು
ಈ ಶಿಬಿರದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ
ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ. ಕಣ್ಣಿನ ಶಸ್ತ್ರ ಚಿಕಿತ್ಸೆ, ಹೆರಿಗೆ, ಸಿಜೇರಿಯನ್ ಹೆರಿಗೆ ಮತ್ತು ಸೀಳು ತುಟ ವಿಕಲಾಂಗತೆಗಳನ್ನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ









