ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕಬೇಲ ಶ್ರೀ ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಇದರ 45ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಫೆ.1ರಂದು ಆದಿತ್ಯವಾರ ಕಬೇಲ ಬಾಕಿಮಾರು ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕೋತ್ಸವದ ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿ ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು, ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ನಮ್ಮಲ್ಲಿ ಹಿಂದೂ ಎನ್ನುವ ಅಭಿಮಾನ ಕಡಿಮೆಯಾಗಿದೆ, ಹಿಂದೂ ಸಮಾಜವು ಹಿಂದುಳಿಯಲು ನಮ್ಮ ರಾಜಕೀಯ ವ್ಯವಸ್ಥೆಯೂ ಕೂಡ ಕಾರಣ, ರಾಜಕೀಯ ಶಕ್ತಿಗಳು ಸಮಾಜವನ್ನು ವಿಭಜನೆ ಮಾಡಿ ತುಷ್ಟಿಕರಣ ಮಾಡುತ್ತಿದೆ, ಹಿಂದೂ ಸಮಾಜಕ್ಕೆ ಪ್ರಾಮಾಣಿಕತೆ ಮತ್ತು ಕೃತಜ್ಞತೆ ಅಗತ್ಯ, ಇಂತಹ ಯುವಕರ ಸಂಘಟನಗಳು ಶಿಕ್ಷಣ ಮತ್ತು ಸಂಸ್ಕಾರಗಳೊಂದಿಗೆ ಹಿಂದೂ ಸಮಾಜವನ್ನು ಜಾಗೃತಗೊಳಿಸಿ, ಬಲಿಷ್ಠಗೊಳಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪುದು ಗ್ರಾ ಪಂ ಸದಸ್ಯ ಪದ್ಮನಾಭ ಶೆಟ್ಟಿ ಮಾತನಾಡಿ,ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಒಟ್ಟಿಗೆ ಈ ಭಾಗದ ಯುವಕರು ಎಲ್ಲರನ್ನು ಒಟ್ಟುಗ್ಗೂಡಿಸಿ ಸಂಘಟನೆಯನ್ನು ಗಟ್ಟಿಗೊಳಿಸಿ,ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ,ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ದೇವರ ಅನುಗ್ರಹ ಎಂದಿಗೂ ಇದೆ ಎಂದು ಹೇಳಿದರು.
ದ ಕ ಜಿಲ್ಲಾ ಬಿ ಜೆ ಫಲಾನುಭವಿ ಪ್ರಕೋಷ್ಠದ ಸಂಚಾಲಕ ಜಯಶ್ರೀ ಕರ್ಕೇರ ಮಾತನಾಡಿ, ಆಧುನಿಕ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಕಡಿಮೆಯಾಗಿ, ಜಾತಿ ಪದ್ಧತಿ ಭ್ರಷ್ಟಾಚಾರ,ಮೇಲುಕೀಳು ಭಾವನೆ ಜಾಸ್ತಿಯಾಗುತ್ತಿದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತ ಸಂಭ್ರಮದ ಈ
ಸಂದರ್ಭದಲ್ಲಿ ಪಂಚಪರಿವರ್ತನೆಗಳ ಮೂಲಕ ಯುವಕರು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕು, ನಮ್ಮಕಷ್ಟಗಳಿಗೆ ಊರಿನ ಸಂಘಟನೆಗಳು ಸಹಕಾರಿಯಾಗುತ್ತದೆ ಎಂದರು
ವೇದಿಕೆಯಲ್ಲಿ ಉದ್ಯಮಿ ರಾಮಕೃಷ್ಣ ಶೆಟ್ಟಿ ಕಬೇಲಗುತ್ತು,ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಗಾಂಭೀರ, ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಶಾಲಿನಿ ಪುಷ್ಪರಾಜ್, ಗೌರವದ್ಯಕ್ಷ ಚಂದ್ರಹಾಸ ಪೂಜಾರಿ, ಸಲಹೆಗಾರ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಸಾಧಕ ವಿದ್ಯಾರ್ಥಿ ಉಜ್ವಲ್ ಹಾಗೂ ಸಂಘದ ಹಿರಿಯ ಸಲಹೆಗಾರಾದ ಚಂದ್ರಹಾಸ ಪೂಜಾರಿ, ಬಾಲಕೃಷ್ಣ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಉಜ್ವಲ್ ಕಬೇಲ ಸ್ವಾಗತಿಸಿ,ಯಸ್ಮಿತ್ ಬಹುಮಾನಿತರ ಪಟ್ಟಿ ವಾಚಿಸಿದರು, ಯಶೋದರ ಕಬೇಲ ವಂದಿಸಿ, ಕಿಶೋರ್ ಕುಮಾರ್ ಸುಜೀರು ಕಾರ್ಯಕ್ರಮ ನಿರೂಪಿಸಿದರು.ನಾಗಪ್ಪ ಪೂಜಾರಿ ಕಬೇಲ ಹಾಗೂ ಜೀವನ್ ಕಬೇಲ ಸಹಕರಿಸಿದರು
ಅಂದು ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಶ್ವತ್ಥಕಟ್ಟೆ ಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು,ಸಂಜೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ "ಬೊಳ್ಳಿ ಮಲೆತ ಬೊಲ್ಲು"ಯಕ್ಷಗಾನ ಬಯಲಾಟ ನಡೆಯಿತು.














