ಕಳ್ಳಿಗೆ: ಮೇರಮಜಲು ಮಂಡಲ ವತಿಯಿಂದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ. ಸತ್ಯದ ಪರವಾಗಿ ನಿಲ್ಲುವುದೇ ಹಿಂದೂ ಧರ್ಮ: ದೇವಿಪ್ರಸಾದ್ ಶೆಟ್ಟಿ

Coastal Bulletin
ಕಳ್ಳಿಗೆ: ಮೇರಮಜಲು ಮಂಡಲ ವತಿಯಿಂದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ. ಸತ್ಯದ ಪರವಾಗಿ ನಿಲ್ಲುವುದೇ ಹಿಂದೂ ಧರ್ಮ: ದೇವಿಪ್ರಸಾದ್ ಶೆಟ್ಟಿ

ಬಂಟ್ವಾಳ: ಹಿಂದೂ ಸಂಗಮ ಆಯೋಜನಾ ಸಮಿತಿ ಮೇರಮಜಲು ಇದರ ಅಶ್ರಯದಲ್ಲಿ ಕಳ್ಳಿಗೆ, ಕೊಡ್ಮಾಣ್, ಮೇರಮಜಲು ಗ್ರಾಮಗಳನ್ನೊಳಗೊಂಡ ಮೇರಮಜಲು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವು ಕಳ್ಳಿಗೆ ಗ್ರಾಮದ ಪೆರಿಯೋಡಿಬೀಡು ಬಾಕಿಮಾರು ಗದ್ದೆಯಲ್ಲಿ ಫೆ.1ರಂದು ಆದಿತ್ಯವಾರ ನಡೆಯಿತು.

ಮಧ್ಯಾಹ್ನ 2.30ಕ್ಕೆ ಬ್ರಹ್ಮರಕೂಟ್ಲು ಶ್ರೀ ಬ್ರಹ್ಮ ಸನ್ನಿಧಿಯಿಂದ ವಿವಿಧ ಕುಣಿತ ಭಜನಾ ತಂಡಗಳು ವಾದ್ಯಘೋಷಗಳೊಂದಿಗೆ ಸಹಿತ ಸಹಸ್ರಾರು ಹಿಂದೂ ಭಗವದ್ಭಕ್ತರ ಬೃಹತ್ ಮೆರವಣಿಗೆ ಪೆರಿಯೋಡಿಬೀಡುವಿಗೆ ಆಗಮಿಸಿತು. 

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿ ಹಿಂ ಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸಾಣೂರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ,ಹಿಂದುತ್ವಕ್ಕಾಗಿ ಸಾವಿರಾರು ವರ್ಷ ಹೋರಾಟವಾಗಿದೆ,ನಾವೆಲ್ಲ ಪುಣ್ಯವಂತರು ಹಿಂದೂ ಸಮಾಜದಲ್ಲಿ ಜಾಗೃತಿ ನಿರ್ಮಾಣವಾಗಿದೆ, ಹಿಂದೂ ಧರ್ಮವನ್ನು ತಪ್ಪಾಗಿ ಅರ್ಥೈಸಲಾಗಿದೆ, ಆದರೆ ಸತ್ಯದ ಪರವಾಗಿ ನಿಲ್ಲುವುದೇ ಹಿಂದೂ ಧರ್ಮ, ಹಿಂದೂ ಎಂದರೆ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ, ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಇದೆ, ಹಿಂದುತ್ವ ಜಗತ್ತನ್ನು ಒಟ್ಟು ಮಾಡುವ ಕಾರ್ಯ ಮಾಡುತ್ತಿದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಲಗಿರುವ ಹಿಂದೂ ಸಮಾಜವನ್ನು ಜಾಗೃತಿ ಮಾಡುವ ಕೆಲಸ ಮಾಡುತ್ತಿದೆ, ಹಿಂದೂ ಧರ್ಮ ಮೃತ್ಯುಂಜಯ. ಹಿಂದೂ ಸ್ವಾಭಿಮಾನಿ ಶಕ್ತಿವಂತನಾದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ, ದೇಶವನ್ನು ಜಗದ್ಗುರುವಾಗಿ ಮಾಡಲು ಹಿಂದೂ ಸಮಾಜ ಜಾತಿ ಭೇದ ರಾಜಕೀಯ ಮರೆತು ಒಗ್ಗೂಡಬೇಕಿದೆ ಎಂದರು.

ಬ್ರಹ್ಮಶ್ರೀ ಆನಂದ ಸಿದ್ಧಿಪೀಠಂ ಮತ್ತು ಶ್ರೀ ಲಕ್ಷಿ ಭೂವರಾಹ ಸ್ವಾಮಿ ಸಾಲಿಗ್ರಾಮ ಕ್ಷೇತ್ರದ ಡಾ. ಆನಂದ ಗುರೂಜಿ ಮಾತನಾಡಿ,ಎಲ್ಲರನ್ನು ಒಗ್ಗೂಡಿಸಿ ಹಿಂದೂ ಸಂಗಮದ ಮೂಲಕ ಹಿಂದುತ್ವದ ಘರ್ಜನೆ ಮೊಳಗಿಸಿ ಹಿಂದುತ್ವದ ವಿರಾಟ್ ಶಕ್ತಿ ಅನಾವರಣವಾಗಿದೆ,ಹಿಂದೂಗಳು

ವಿಶಾಲವಾಗಿದೆ ಬೆಳೆದ ಆಲದ ಮರ, ಅಶ್ವಥ ಮರ, ಹಿಂದುತ್ವದ ವಿರುದ್ದ ನಿಂತು ಮಾತಾನಾಡುವ ದಮ್ಮು ಯಾರಿಗೋ ಇಲ್ಲ,ನಾವೆಲ್ಲರೂ ಧರ್ಮ ಸಂಸ್ಕಾರದಲ್ಲಿ ನಡೆಯಬೇಕು, ತಾಯಂದಿರು ಸಂಸ್ಕಾರ ಕಲಿತು ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡಬೇಕು, ಮೊಬೈಲ್ ಗೀಳಿನಿಂದ ಬಾಂದವ್ಯ, ಬಂಧುತ್ವ ಕಮ್ಮಿಯಾಗಿದೆ, ಹಿಂದುತ್ವಕ್ಕಾಗಿ ಒಗ್ಗೂಡುವ,ಸನಾತನ ಧರ್ಮಕ್ಕೆ ಅಳಿವಿಲ್ಲ ಎಂದರು.

ವೇದಿಕೆಯಲ್ಲಿ ಗೋವಿನತೋಟ ರಾಧಾಸುರಭಿ ಗೋಮಂದಿರ ಭಕ್ತಿಭೂಷಣ್‌ದಾಸ್ ಪ್ರಭೂಜಿ, ದಿವಾಕರ ಪಂಬದಬೆಟ್ಟು ಅಧ್ಯಕ್ಷರು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು, ಅರ್ಚಕ ಹರಿಯಪ್ಪ ಕೋಟ್ಯಾನ್, ಅರ್ಚಕ ಉಪೇಂದ್ರ ಮೂಲ್ಯ, ಅರ್ಚಕ ಬೀರಣ್ಣ ಆತರ್ ಬೆಂಜನಪದವು, ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ಹರೀಶ್ ಶೆಟ್ಟಿ ನಾಲದೆಗುತ್ತು, ರಾಮಪ್ಪ ಮೂಲ್ಯ ಕಾಪಿಕಾಡ್,ವಿದ್ಯಾಧರ ಅಬ್ಬೆಟ್ಟು, ವಿಶ್ವನಾಥ ಪೂಜಾರಿ ದಾಸರಕೋಡಿ, ದೇವಪ್ಪ ಪಕ್ಕಳಪಾದೆ ಮೇರಮಜಲು, ಶಶಿಧರ್ ಬ್ರಹ್ಮರಕೂಟ್ಲು, ವಸಂತ ಬಡ್ಡೂರು, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಉಪಸ್ಥಿತರಿದ್ದರು.

ಬಂಟ್ವಾಳ ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಪ್ರಾಸ್ತವಿಕವಾಗಿ ಮಾತನಾಡಿದರು.

ಡಾ ಸ್ವಾತಿ ಕೊಡ್ಮಾಣ್ ಹಿಂದೂ ಸಂಗಮದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು. ಹೇಮಂತ್ ದರಿಬಾಗಿಲು ಸ್ವಾಗತಿಸಿ, ಶಶಿಧರ ಕೊಡ್ಮಾಣ್ ಧನ್ಯವಾದವಿತ್ತರು, ಮನಿಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

ಸಾವಿರಾರು ಹಿಂದೂ ಭಗವದ್ಭಕ್ತರ ಕಾರ್ಯಕ್ರಮದ ಕೊನೆಯ ತನಕ ಇದ್ದು ಯಶಸ್ವಿಗೆ ಸಹಕರಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Leave a Comment