ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇಲ್ಲಿ 76ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಜ.03 ಶನಿವಾರ ಸೂರ್ಯೋದಯದಿಂದ ಜ.04ನೇ ಆದಿತ್ಯವಾರ ಸೂರ್ಯೋದಯದವರೆಗೆ ನಡೆಯಲಿದೆ.
ಜ 3ರಂದು ಶನಿವಾರ ಬೆಳಿಗ್ಗೆ ಗಂಟೆ 6-55ಕ್ಕೆ ದೀಪ ಪ್ರಜ್ವಲಿಸುವುದರೊಂದಿಗೆ ಏಕಾಹ ಭಜನೆ ಪ್ರಾರಂಭಗೊಳ್ಳಲಿದ್ದು, ಸಾಮಾಜಿಕ ಕಾರ್ಯಕರ್ತ ಗೋಪಾಲ ಕುಲಾಲ್ ಗೋವಿಂತೋಟ ದೀಪ ಪ್ರಜ್ವಲನಗೈಯ್ಯಲಿದ್ದಾರೆ.
ಮಧ್ಯಾಹ್ನ ಮಹಾಪೂಜೆ ಬಳಿಕ
ಅನ್ನ ಸಂತರ್ಪಣೆ,ಸಾಯಂಕಾಲ ಗಂಟೆ 7ಕ್ಕೆ ಸಂಧ್ಯಾಪೂಜೆ,ರಾತ್ರಿ ಗಂಟೆ 12-00ಕ್ಕೆ ಮಹಾಪೂಜೆ ನಡೆಯಲಿದೆ.
ಜ. 04ರಂದು ರವಿವಾರ ಬೆಳಿಗ್ಗೆ ಸೂರ್ಯೋದಯ ಗಂಟೆ 6-55ಕ್ಕೆ ಏಕಾಹ ಭಜನಾ ಮಂಗಳಾಚರಣೆಯಾಗಿ ಪ್ರಸಾದ ವಿತರಣೆ ನಡೆಯಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.










