Coastal Bulletin

ತೆಲಂಗಾಣ: 93 ವರ್ಷದ ತಾತನ ಮೃತದೇಹವನ್ನು ಮೊಮ್ಮಗನೊಬ್ಬ ಫ್ರಿಡ್ಜ್‌ ನಲ್ಲಿಟ್ಟಿದ್ದ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. ತಾತನ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಮೊಮ್ಮಗ ಈ ಕೃತ್ಯವೆಸಗಿದ್ದಾನೆ.

ಕೊಳೆತ ಮೃತದೇಹದ ವಾಸನ ಹರಡಿದ್ದರಿಂದ  ನೆರೆ ಹೊರೆಯವರು  ಪೊಲೀಸರಿಗೆ ದೂರು ನೀಡಿದ್ದಾರೆ. ಶೋಧ ನಡೆಸಿದಾಗ ಕೊಳೆತ ಮೃತದೇಹ ಫ್ರಿಡ್ಜ್‌ ನಲ್ಲಿ ಪತ್ತೆಯಾಗಿದೆ. ತಾತ- ಮೊಮ್ಮೊಗ ನಿಖಿಲ್ ಪರ್ಕಾಲಾ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತಾತನ ನಿವೃತ್ತಿ ವೇತನದಿಂದಲೇ ಜೀವನ

ಸಾಗಿಸಲಾಗುತ್ತಿತ್ತು.ಅನಾರೋಗ್ಯದಿಂದ  ತಾತ ಹಾಸಿಗೆ ಹಿಡಿದಿದ್ದರು. ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದರು.ಮೃದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ. ಫ್ರಿಡ್ಜ್‌ ನಲ್ಲಿ ಇಟ್ಟೆ. ಅಂತ್ಯ ಸಂಸ್ಕಾರ ನಡೆಸಲು ದುಡ್ಡು ಇಲ್ಲದ ಕಾರಣ ಈ ರೀತಿ ಮಾಡಿದೆ ಎಂದು ಮೊಮ್ಮಗ ನಿಖಿಲ್  ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

Leave a Comment