Coastal Bulletin

ಬೆಂಗಳೂರು:ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಸಿಟ್ಟಾದ ಮ್ಯಾನೇಜರ್ ಸಹೋದ್ಯೋಗಿಯ ಕಪಾಳಕ್ಕೆ ಬಾರಿಸಿದ ಘಟನೆ ಬೆಂಗಳೂರಿನ‌ ಡೊಮಿನೊಸ್ ಪಿಜ್ಜಾ ಹಟ್​ ಒಂದರಲ್ಲಿ ನಡೆದಿದೆ.

ಬೆಂಗಳೂರಿನ ಬಸವನಗುಡಿಯ ಪಿಜ್ಜಾ ಹಟ್​ನ ಮ್ಯಾನೇಜರ್​, ಅಲ್ಲಿಯೇ ಕೆಲಸದಲ್ಲಿರುವ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.ಆಕೆ ತನ್ನನ್ನು ಪ್ರೀತಿಸದೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಸಿಟ್ಟಾದ ಮ್ಯಾನೇಜರ್​ ಆಕೆಯ ಕಪಾಳಕ್ಕೆ ಬಾರಿಸಿದ್ದಾನೆ.ಹೊಡೆದ ರಭಸಕ್ಕೆ ಯುವತಿ

ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಹೊಡೆತದಿಂದ‌ ಕೆಳಕ್ಕುರುಳುವ ಸಿಸಿಟಿವಿಯ ದೃಶ್ಯ ವೈರಲ್ ಆಗಿದೆ. ಆದರೆ ಆಕೆ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪೋಲೀಸರಿಗೆ ದೂರು ಕೊಟ್ಟಿಲ್ಲ ಎಂಬುದು ತಿಳಿದುಬಂದಿದೆ.


Leave a Comment