Coastal Bulletin

ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಗಡಿಭಾಗದಲ್ಲಿ ನಿರ್ಬಂಧ ವಿಧಿಸಲಾಗಿದ್ದು,ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಒಳಪ್ರವೇಶಕ್ಕೆ ಅನುಮತಿ ನೀಡಲಾಗಿದೆ.ಮತ್ತು ಗಡಿಭಾಗದಲ್ಲಿ ಜಿಲ್ಲಾಡಳಿತದ ಮೂಲಕ ಆರೋಗ್ಯ ಇಲಾಖೆಯಿಂದ ನಡೆಸುತ್ತಿದ್ದ ಕೋವಿಡ್ ಪರೀಕ್ಷೆ ರದ್ದುಪಡಿಸಲಾಗಿದೆ.ಈ ಕ್ರಮವನ್ನು ಖಂಡಿಸಿ ಕಾಸರಗೋಡಿನ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ರಸ್ತೆಗೆ ಅಡ್ಡಲಾಗಿ ಕುಳಿತು ಹತ್ತು ನಿಮಿಷ ಕಾಲ ಪ್ರತಿಭಟನೆ ನಡೆಸಿದರು.

ಪರೀಕ್ಷೆಗಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರಿಗೆ ಪೂರ್ತಿ ನಿರ್ಬಂಧ ವಿಧಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದು ನಿರ್ಬಂಧವನ್ನು ಕಟ್ಟುನಿಟ್ಟಿನಲ್ಲಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ  ನೀಡಿದರು. 

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಜೇಂದ್ರ, 'ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ನಡೆದುಕೊಂಡಿದ್ದೇವೆ. ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣ ಕಂಡುಬಂದಿದೆ. ಕೇರಳಕ್ಕೆ ಗಡಿಯನ್ನು ಹೊಂದಿಕೊಂಡಿರುವುದು ಮತ್ತು ಆ ಭಾಗದ ಜನರು ಬೇರೆ ಬೇರೆ

ಕಾರ್ಯಗಳಿಗೆ ಮಂಗಳೂರಿಗೆ ಬರುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ ಕೇರಳದಿಂದ‌ ಕರ್ನಾಟಕಕ್ಕೆ ಬರುವವರು 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ವರದಿ‌ ಹೊಂದಿರುವುದು ಕಡ್ಡಾಯವಾಗಿದೆ.ಅಲ್ಲದೆ, ಗಡಿಭಾಗದಲ್ಲಿ ಕೋವಿಡ್ ತಪಾಸಣೆ ನಡೆಸಿ, ಒಳಬಿಡುವುದರಿಂದ ಸೋಂಕಿತರು ಒಳಬಂದು ಅವರಿಂದ ಮತ್ತಷ್ಟು ಹರಡಲು ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಇಲಾಖೆಯ ತಪಾಸಣೆಯನ್ನೇ ರದ್ದು ಪಡಿಸಿದ್ದೇವೆ. ಅಗತ್ಯ ಇದ್ದವರು ಅಲ್ಲಿಯೇ ತಪಾಸಣೆ ಮಾಡಿಕೊಂಡು ಬರಲಿ. ದೈನಂದಿನ ಪ್ರಯಾಣಿಕರು 15 ದಿನಕ್ಕೊಮ್ಮೆ ಟೆಸ್ಟ್ ಮಾಡಿಸಿದರೆ ಸಾಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿಕೊಂಡು ಮಂಗಳೂರಿಗೆ ಬರಬಹುದು' ಎಂದು ಹೇಳಿದರು.

Leave a Comment