ಜ್ಯೋತಿಗುಡ್ಡೆ: ನ.2ರಂದು ಸೌಹಾರ್ದ ಫ್ರೆಂಡ್ಸ್ ಸರ್ಕಲ್, ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ.

Coastal Bulletin
ಜ್ಯೋತಿಗುಡ್ಡೆ: ನ.2ರಂದು ಸೌಹಾರ್ದ ಫ್ರೆಂಡ್ಸ್ ಸರ್ಕಲ್, ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ.

ಬಂಟ್ವಾಳ :ಸೌಹಾರ್ದ ಫ್ರೆಂಡ್ಸ್ ಸರ್ಕಲ್, ಜ್ಯೋತಿಗುಡ್ಡೆ ತುಂಬೆ, ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ 2 ನವೆಂಬರ್, 2024 ರಾತ್ರಿ 9-00ರಿಂದ ಜ್ಯೋತಿಗುಡ್ಡೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಇರುವ SFC ಮೈದಾನದಲ್ಲಿ ನಡೆಯಲಿದೆ.

ಪ್ರವೇಶ ಶುಲ್ಕ ರೂ. 600/- ಮುಕ್ತ ಪುರುಷರ ವಾಲಿಬಾಲ್ ಪಂದ್ಯಾಟ,ಪ್ರಥಮ ಬಹುಮಾನ : ರೂ. 9999/- ನಗದು ಮತ್ತು SFC ಟ್ರೋಫಿ,ದ್ವಿತೀಯ ಬಹುಮಾನ : ರೂ. 7777/- ನಗದು ಮತ್ತು SFC ಟ್ರೋಫಿ ತೃತೀಯ ಬಹುಮಾನ : ರೂ. 5555/- ನಗದು ಮತ್ತು SFC ಟ್ರೋಫಿ,ಚತುರ್ಥ ಬಹುಮಾನ : ರೂ. 3333/- ನಗದು ಮತ್ತು SFC ಟ್ರೋಫಿ,ಬೆಸ್ಟ್ ಅಟ್ಯಾಕರ್, ಬೆಸ್ಟ್ ಸೆಟ್ಟರ್, ಬೆಸ್ಟ್ ಅಬೊ ಹಾಗೂ ಬೆಸ್ಟ್ ಆಲ್‌ರೌಂಡರ್ ಬಹುಮಾನ ನೀಡಿ ಗೌರವಿಸಲಾಗುವುದು.


ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಆಟಗಾರರನ್ನು ತಂಡದಲ್ಲಿ ಅಡಿಸುವಂತಿಲ್ಲ. ಆಡಿಸಿದ್ದಲ್ಲಿ ಬೇರೆ ತಂಡಗಳಿಂದ

ಆಕ್ಷೇಪ ಬಂದಲ್ಲಿ ತಂಡವನ್ನು ಕೂಡಲೇ ಪಂದ್ಯಾಟದಿಂದ ಅನರ್ಹಗೊಳಿಸಲಾಗುವುದು.

ವಿಶೇಷ :ಸೂಚನೆ

ಫೋನ್ ಪೇ ಅಥವಾ ಗೂಗಲ್ ಪೇ ಮಾಡುವವರು : ដ : 8105673573 ಈ ನಂಬರನ್ನು ಸಂಪರ್ಕಿಸಬಹುದು.

ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟದ ನಿಯಮಗಳು ಹಾಗೂ ಷರತ್ತುಗಳು :

1. ಮುಕ್ತ ವಾಲಿಬಾಲ್ ಪಂದ್ಯಾಟಕ್ಕೆ ಬರುವ ತಂಡಗಳು ಟೀಮ್ ಫೀಸ್ ರೂ. 600/- ಪಾವತಿಸಿ ತಂಡವನ್ನು ನೋಂದಾಯಿಸತಕ್ಕದ್ದು.

2. ತೀರ್ಪುಗಾರರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ ತೀರ್ಮಾನ. ಚರ್ಚೆಗೆ ಆಸ್ಪದವಿಲ್ಲ.

3. ಕೇವಲ ತಂಡದ ನಾಯಕರಿಗೆ ಮಾತ್ರ ತೀರ್ಪುಗಾರರೊಂದಿಗೆ ಹಾಗೂ ಸಂಘಟಕರೊಂದಿಗೆ ಸಂವಹನೆಗೆ (DISCUSSION) ಅವಕಾಶ.

4. ಪಂದ್ಯ ಆರಂಭವಾಗುವುದಕ್ಕಿಂತ 15 ನಿಮಿಷದ ಮೊದಲು ತಮ್ಮ ಇರುವಿಕೆಯನ್ನು ತಂಡಗಳು ಖಚಿತ ಪಡಿಸಿಕೊಳ್ಳತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ :7892424804, 8310082415, 8073747314

Leave a Comment