ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಅನಂತಾಡಿ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಗಿದೆ. (ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ) ಜಲಜೀವನ್ ಮಿಷನ್ ಆಶಯದಂತೆ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ.
ಜು.27 ರಂದು ಬುಧವಾರ ಅನಂತಾಡಿ ಗ್ರಾಮ ಪಂಚಾಯತಿನಲ್ಲಿ ಹರ್ ಘರ್ ಜಲ್ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಸಲಾಯಿತು. ಗ್ರಾ. ಪಂ ಅಧ್ಯಕ್ಷ ಗಣೇಶ್ ಪೂಜಾರಿ, ಉಪಾಧ್ಯಕ್ಷ ಟಿ. ಕುಸುಮಾಧರ ಗೌಡ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಜಿತ್ ಕುಮಾರ್, ಪಂಚಾಯತಿ ಕಾರ್ಯದರ್ಶಿ, ಪಂಚಾಯತ್ ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಪಂಪು ಚಾಲಕರು, ಆಶಾ ಕಾರ್ಯಕರ್ತೇಯರು, ಆರೋಗ್ಯ ಸಹಾಯಕಿಯರು ಗ್ರಾಮಸ್ಥರು, ಫಲಾನುಭವಿಗಳ ಸಮ್ಮುಖದಲ್ಲಿ ಅನಂತಾಡಿ ಗ್ರಾಮವನ್ನು ಹರ್ ಘರ್ ಜಲ್
ಗ್ರಾಮ ಎಂದು ಘೋಷಣೆ ಮಾಡಲಾಯಿತು.
ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಮಾತನಾಡಿ ಜಲಜೀವನ್ ಮಿಷನ್‌ನ ಅನುಷ್ಠಾನ ಯಶಸ್ವಿಯಾಗಿದೆ. ಸರಕಾರದ ಈ ಯೋಜನೆ ಗ್ರಾಮದ ಪ್ರತಿಯೊಬ್ಬರಿಗೂ ಶುದ್ದ ಮತ್ತು ಸುರಕ್ಷಿ ನೀರು ಒದಗಿಸಿಕೊಡಲು ಸಹಕಾರಿಯಾಗಿದೆ. ಆದುದರಿಂದ ಈ ಗ್ರಾಮವನ್ನು ಹರ್‌ಘರ್‌ಜಲ್ ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್‌ನ ಯೋಜನಾ ವ್ಯವಸ್ಥಾಪಕ ವಿಘ್ನೇಶ್‌ರಾಜ್, ಎಂಜಿನಿಯರ್ ನಾಸೀರ್ ಹಾಗೂ ಅಶ್ವಿನ್, ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯ ಎಚ್‌ಆರ್‌ಡಿ ಚರಣ್‌ರಾಜ್, ಜೆಜೆಎಮ್ವಿ ಯು ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ನ ಸಿಬ್ಬಂದಿಗಳಾದ ವಿಲ್ಮಾ, ಗುಣವತಿ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು. ಗುಣವತಿ ಕಾರ್ಯಕ್ರಮ ನಿರೂಪಿಸಿದರು.
















