Coastal Bulletin

ಬೆಂಗಳೂರು :ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರುವ ಸಚಿವರ ಪಟ್ಟಿ ಫೈನಲ್ ಆಗಿದೆ.ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಹೈ ಕಮಾಂಡ್​ ಭೇಟಿ ಮಾಡಿ ಸಚಿವರ ಪಟ್ಟಿ ಫೈನಲ್​​​ ಆದ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆ ಬಳಿಕ ಸಚಿವ ಸ್ಥಾನ ಫಿಕ್ಸ್ ಆಗಿರುವ ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸಿಎಂ ಈವರೆಗೆ ಒಟ್ಟು 29 ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನ ನೀಡಿರುವ ವಿಷಯವನ್ನು ಖಚಿತಪಡಿಸಿದ್ದಾರೆ.ಇಂದು 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 7 ಮಂದಿ ವಕ್ಕಲಿಗ, 8 ಮಂದಿ ಲಿಂಗಾಯತ, 3 ಎಸ್ಸಿ, ತಲಾ 1 ರೆಡ್ಡಿ ಮಹಿಳೆ, ಎಸ್ಟಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲಾಗಿದೆ. ಇನ್ನು ಮಾಜಿ ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ.ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ನಡೆಯಲಿದೆ.

ಪ್ರಮಾಣ ವಚನಕ್ಕೆ ಆಹ್ವಾನ ಸ್ವೀಕರಿಸಿರುವ ಶಾಸಕರ ಪಟ್ಟಿ

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿ.ಸಿ. ಪಾಟೀಲ್ - ಹಿರೇಕೆರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ

5.ಉಮೇಶ್ ಕತ್ತಿ- ಹುಕ್ಕೇರಿ

6.ಎಸ್.ಟಿ.ಸೋಮಶೇಖರ್- ಯಶವಂತಪುರ

7.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

8.ಬೈರತಿ‌

ಬಸವರಾಜ - ಕೆ ಆರ್ ಪುರಂ 

9.ಮುರುಗೇಶ್ ನಿರಾಣಿ - ಬಿಳಿಗಿ

10.ಶಿವರಾಂ ಹೆಬ್ಬಾರ್- ಯಲ್ಲಾಪುರ

11.ಶಶಿಕಲಾ ಜೊಲ್ಲೆ- ನಿಪ್ಪಾಣಿ

12.ಕೆಸಿ ನಾರಾಯಣ್ ಗೌಡ - ಕೆ‌ಆರ್ ಪೇಟೆ

13.ಸುನೀಲ್ ಕುಮಾರ್  - ಕಾರ್ಕಳ

14.ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ

15.ಗೋವಿಂದ ಕಾರಜೋಳ-ಮುಧೋಳ

16.ಮುನಿರತ್ನ- ಆರ್ ಆರ್ ನಗರ

17.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ 

18.ಗೋಪಾಲಯ್ಯ-   ಮಹಾಲಕ್ಷ್ಮಿ ಲೇಔಟ್ 

19.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

20.ಹಾಲಪ್ಪ ಆಚಾರ್ - ಯಲ್ಬುರ್ಗ

21.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ 

22.ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ 

23.ಪ್ರಭು ಚೌವ್ಹಾಣ್ - ಔರಾದ್

24.ವಿ ಸೋಮಣ್ಣ - ಗೋವಿಂದ್ ರಾಜನಗರ

25.ಎಸ್ ಅಂಗಾರ-ಸುಳ್ಯ

26.ಆನಂದ್ ಸಿಂಗ್ - ಹೊಸಪೇಟೆ

27.ಸಿ ಸಿ‌ ಪಾಟೀಲ್ - ನರಗುಂದ

28.ಬಿಸಿ ನಾಗೇಶ್ - ತಿಪಟೂರು

29.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

Leave a Comment