ಮುಂದಿನ ದಿನಗಳಲ್ಲಿ ಯಕ್ಷತರಂಗ ಪ್ರತಿಯೊಂದು ಕಾರ್ಯಕ್ರಮವು ವಿಶ್ವವಿಖ್ಯಾತಿ ಪಡೆಯಲಿ: ಶ್ರೀ.ಸಿ.ಎನ್ ನಾಗರಾಜ್

Coastal Bulletin
ಮುಂದಿನ ದಿನಗಳಲ್ಲಿ ಯಕ್ಷತರಂಗ ಪ್ರತಿಯೊಂದು ಕಾರ್ಯಕ್ರಮವು ವಿಶ್ವವಿಖ್ಯಾತಿ ಪಡೆಯಲಿ: ಶ್ರೀ.ಸಿ.ಎನ್ ನಾಗರಾಜ್

ಯಕ್ಷತರಂಗ ಬೆಂಗಳೂರು ಕಳೆದ 12 ವರ್ಷಗಳಿಂದ ಯಕ್ಷಗಾನ ತರಬೇತಿಯನ್ನು ನೀಡಿ ಹಲವಾರು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿಸಿ ಜನಮೆಚ್ಚುಗೆ ಪಾತ್ರವಾಗಿದೆ ಕೇವಲ ಯಕ್ಷತರಂಗವು ಯಕ್ಷಗಾನ ಕೈ ಸೀಮಿತವಾಗದೆ ಅನಾಥ ಆಶ್ರಮ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಸಹಾಯವನ್ನು ನೀಡುತ್ತಾ ಇನ್ನಿತರ ಹಲವಾರು ಸಮಾಜ ಮುಖಿ ಕೆಲಸವು ನಿರಂತರವಾಗಿ ನಡೆಯುತ್ತಿದೆ ಎಂದು ಸಿದ್ದಗಂಗಾ ಶಾಲೆಯ ಸ್ಥಾಪಕ ಸದಸ್ಯರು ಹಾಗೂ ಶಿಕ್ಷಕರಾದ ಶ್ರೀ ಸಿ.ಎನ್ ನಾಗರಾಜ್ ಹೇಳಿದರು.

 ಇವರು ರಘವನ ಹಳ್ಳಿಯಲ್ಲಿರುವ ಶ್ರೀ ಸಿದ್ದಗಂಗಾ ವಿದ್ಯಾ ಕೇಂದ್ರದಲ್ಲಿ ಯಕ್ಷತರಂಗ ಬೆಂಗಳೂರಿನ ವತಿಯಿಂದ ನಡೆದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದರು. 

ಕಳೆದ ಹಲವಾರು ವರ್ಷಗಳಿಂದ ಸಿದ್ದಗಂಗಾ ಶಾಲೆಯ ಸಭಾಂಗಣದಲ್ಲಿ ಯಕ್ಷತರಂಗದ ವತಿಯಿಂದ ಯಕ್ಷಗಾನದ ತರಬೇತಿ ಶಿಬಿರವು ನಡೆಯುತ್ತಿದ್ದು ಈ ಶಾಲೆಯ ಬಡ ವಿದ್ಯಾರ್ಥಿಯವರಿಗೆ ಉಚಿತವಾಗಿ ಯಕ್ಷಗಾನದ ತರಬೇತಿ ನೀಡುತ್ತೀರುವುದು ಹಾಗೂ ಇದೇ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ವಿಶೇಷತೆಯಾಗಿದೆ ಮುಂದಿನ ದಿನಗಳಲ್ಲಿ ಯಕ್ಷತರಂಗ ಪ್ರತಿಯೊಂದು ಕಾರ್ಯಕ್ರಮವು ವಿಶ್ವವಿಖ್ಯಾತಿ ಪಡೆಯಲಿ ಎಂದು ಶುಭ ಕೋರಿದರು. 

ಯಕ್ಷತರಂಗ ಬೆಂಗಳೂರಿನ ಅಧ್ಯಕ್ಷರಾದ ಪಳ್ಳಿ ವಿಶ್ವನಾಥ ಶೆಟ್ಟಿಯವರು ಮಾತನಾಡುತ್ತಾ ಕಳೆದ ೧೨ ವರುಷದ ಹಿಂದೆ ತುಳುನಾಡಿನ  ಯುವ ಜನತೆ ತನ್ನ

ಜೀವನಕ್ಕಾಗಿ ಬೆಂಗಳೂರಿಗೆ ಆಗಮಿಸಿ ತಮ್ಮ ಬಿಡುವಿಲ್ಲದ ಸಮಯದ ಮದ್ಯದಲ್ಲೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂಬ ಮನವರಿಕೆಯಲ್ಲಿ ಉತ್ಸಾಹಿ ಯುವಕರೊಂದಿಗೆ ಸ್ಥಾಪಿತವಾದ ಯಕ್ಷತರಂಗ ಬೆಂಗಳೂರು ಇಂದು ಹಲವಾರು ಬಡ ಕುಟುಂಬಕ್ಕೆ ರಕ್ಷ ರಂಗವಾಗಿ ರಕ್ಷಣೆಯನ್ನು ನೀಡುತ್ತಿದ್ದು ಯಕ್ಷತರಂಗದ ಯಕ್ಷಗಾನ ತರಬೇತಿಯನ್ನು ಪಡೆದ ವಿದ್ಯಾರ್ಥಿಯವರು ಮುಂದಿನ ಗಳಲ್ಲಿ ಪ್ರಸಿದ್ಧ ಕಲಾವಿದರಾಗಿ ಮುನ್ನಡೆಯಿರಿ ಎಂದು ಆರ್ಶಿವಾದಿಸಿದರು. 

ವೇದಿಕೆಯಲ್ಲಿ ಯಕ್ಷತರಂಗ ಬೆಂಗಳೂರಿನ ಸಂಚಾಲಕರಾದ ಗೋಪಾಲ್ ಪೂಜಾರಿ ಪಟ್ಟೆ, ಕಾರ್ಯದರ್ಶಿ ಸುಕೇಶ್ ಶೆಟ್ಟಿ ಮಾಳ, ಕೋಶಾಧಿಕಾರಿ ನಿರಂಜನ್ ಸುವರ್ಣ ಪಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಂತೋಷ್ ಶೆಟ್ಟಿ, ಸೆರೇಂದ್ರ ಪೂಜಾರಿ, ಪ್ರದೀಪ್ ಶೆಟ್ಟಿ, ಚಿದಂಬರ ಶೆಟ್ಟಿ ಇನ್ನಿತರರು ಮತ್ತು ಶ್ರೀ ಸಿದ್ದಗಂಗಾ ಶಾಲೆಯ ಆಡಳಿತ ಮಂಡಳಿ ಮತ್ತು ಮಕ್ಕಳು ಸಹಕರಿಸಿದರು. 


Leave a Comment