ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ವತಿಯಿಂದ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ಮುದಲ್ಮೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಪ್ರಥುಲ್, ವೈಷ್ಣವಿ, ತ್ರಿಷಾ, ಛಾಯಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸೇನಾ ವಿಭಾಗದಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ವಿಜಯ್ ಕುಮಾರ್ ಎಂ.ಎ ಹಾಗೂ ಸೇವಾ ವಿಭಾಗದಲ್ಲಿ ರಂಜಿತ್ ಬೊಳ್ಳಾರಿ, ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬಳಿಕ ಸಂಘದ ಮಕ್ಕಳು ಹಾಗೂ ಮಹಿಳಾ ಸದಸ್ಯೆರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗಿನಿಂದ ಸಂಜೆಯವರೆಗೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಕೆಸರಿನಲ್ಲಿ ನಡೆಸಲಾಯಿತು. ಪರಿಸರದ 35ಕ್ಕೂ ಅಧಿಕ ಮನೆಗಳಿಂದ ಸ್ವತಃ ತಾವೇ ತಯಾರಿಸಿದ ಆಟಿ ತಿಂಗಳ ವಿವಿಧ ವನತ್ ತೆನಸ್ ಗಳನ್ನು ತಂದು ಎಲ್ಲರೂ ಸಹಭೋಜನ ಮಾಡಿದರು.
ಬೆಳಿಗ್ಗೆ ನಡೆದ ಆಟಿಡೊಂಜಿ ಗಮ್ಮತ್ತು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕಿರಣ್ ಶೆಟ್ಟಿ, ವೈದ್ಯರು ಫಾದರ್ ಮುಲ್ಲರ್ ಆಸ್ಪತ್ರೆ, ಜಿತೇಶ್ ಉಡುಪಿ, ಸಹ ನಿರ್ದೇಶಕರು ನಗರ ಮತ್ತು ಯೋಜನಾ ಇಲಾಖೆ, ಚಂದ್ರಾವತಿ ವಿಶ್ವನಾಥ್ ಕಾರ್ಪೋರೇಟರ್, ರವೀಂದ್ರ ಕಂಬಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರಾದ ಹೇಮಲತಾ ಪೂಜಾರಿ, ಅರುಣ್ ಕುಮಾರ್ ಗಾಣದಲಚ್ಚಿಲು, ಪದ್ಮನಾಭ ಶೆಟ್ಟಿ ಪುಂಚಮೆ, ಹಿರಿಯರಾದ ವೇಣುಗೋಪಾಲ್ ಕೊಟ್ಟಾರಿ, ಪುರುಷೋತ್ತಮ್ ಗಟ್ಟಿ, ಅರ್ಚಕರಾದ ಸುಧಾಕರ್ ಕೊಟ್ಟಿಂಜ ಭಾಗವಹಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಂದ್ರಹಾಸ್ ಶೆಟ್ಟಿ ಮಾಲಕರು ಹೋಟೆಲ್
ರಂಗೋಲಿ, ಜಯಶ್ರೀ ಕರ್ಕೇರಾ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರ.ಕಾರ್ಯದರ್ಶಿ ಹಾಗೂ ವಿಠಲ್ ಸಾಲಿಯಾನ್, ಉಪಾಧ್ಯಕ್ಷರು, ಭಾ.ಜ.ಪ ಮಂಗಳೂರು ಮಂಡಲ ಸೇರಿದಂತೆ ಗೌರವಾಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಅಧ್ಯಕ್ಷರಾದ ಚೆನ್ನಕೇಶವ ಬೊಳ್ಳಾರಿ, ಕಾರ್ಯದರ್ಶಿ ಪ್ರವೇಶ್ ಕೋಟ್ಯಾನ್, ಆಶೀರ್ವಾದ್ ಮಹಿಳಾ ಸೇವಾ ಸಂಘದ ಗೌರವಾಧ್ಯಕ್ಷೆ ಪಾರ್ವತಿ ಐತ್ತಪ್ಪ ಕುಲಾಲ್, ಅಧ್ಯಕ್ಷೆ ಜಲಜಾಕ್ಷಿ ವಿಜಯ್ ಕೋಟ್ಯಾನ್, ಕಾರ್ಯದರ್ಶಿ ಶ್ರುತಿ ರಾಕೇಶ್ ಕೋಟ್ಯಾನ್, ಗೌರವ ಸಲಹೆಗಾರರಾದ ಐತ್ತಪ್ಪ ಕುಲಾಲ್ ಮುದಲ್ಮೆ, ದೇವಪ್ಪ ಗೌಡ ಬೊಳ್ಳಾರಿ, ನಾರಾಯಣ್ ಕಿರೋಡಿಯನ್ ಮುದಲ್ಮೆ, ಪ್ರದೀಪ್ ಕುಮಾರ್ ಮುದಲ್ಮೆ ಉಪಸ್ಥಿತರಿದ್ದರು.















