Coastal Bulletin

ಹಾಸನ: ಹಾಸನ ಜಿಲ್ಲೆಯ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್‌ ಪಠಣ ಮಾಡಬೇಕೆಂದು ಯಾವ ದಾಖಲೆಗಳಲ್ಲಿಯೂ ಉಲ್ಲೇಖ ಮಾಡಿಲ್ಲ. ಆದರೆ, 90 ವರ್ಷಗಳಿಂದ ತಪ್ಪು ತಿಳುವಳಿಕೆಯಿಂದ ಕುರಾನ್‌ ಪಠಣ ಮಾಡಿಕೊಂಡು ಬರಲಾಗುತ್ತಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಆಗಮ ಪಂಡಿತರು ತಿಳಿಸಿದ್ದಾರೆ.

ಚನ್ನಕೇಶವ ರಥೋತ್ಸವದ ಮುಂದೆ ಕಳೆದ 90 ವರ್ಷಗಳಿಂದ ಕುರಾನ್‌ ಪಠಣ ಮಾಡಲಾಗುತ್ತದೆ. ಮುಸ್ಲಿಂ ಖಾಜಿಗಳನ್ನು ಕರೆತಂದು ಖುರಾನ್‌ ಪಠಣ ಮಾಡಿದ ನಂತರವೇ ರಥವನ್ನು ಎಳೆಯಲಾಗುತ್ತದೆ. ಆದರೆ, ಸುಮಾರು 900 ವರ್ಷಗಳ ಇತಿಹಾಸವಿರುವ ಹಾಗೂ ಕನ್ನಡ ನಾಡನ್ನು ಆಳಿದ ಒಂದು ಹೊಯ್ಸಳ ಸಾಮ್ರಾಜ್ಯದ ಹಿಂದೂ ಆರಾಧ್ಯ ದೈವ ಚನ್ನಕೇಶ್ವರ ಸ್ವಾಮಿಯ ಮುಂದೆ ಅಲ್ಲಾನೇ ಎಲ್ಲಾ, ಅಲ್ಲಾನ ಮುಂದೆ ಯಾವುದೇ ದೇವರಿಲ್ಲ ಎಂದು ಕುರಾನ್‌ ಪಠಣ ಮಾಡಲಾಗುತ್ತದೆ. ನಂತರ, ರಥವನ್ನು ಎಳೆಯುವ ಮೂಲಕ ಹಿಂದೂಗಳು ಹಾಗೂ ಹಿಂದೂ ದೇವರಿಗೆ ಅಪಮಾನ ಮಾಡಲಾಗುತ್ತದೆ.ಈ ಪದ್ದತಿಯನ್ನು ಕೈಬಿಡಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿ ಹೋರಾಟ ಆರಂಭಿಸಿದ್ದವು.

ಇಂದು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಚನ್ನಕೇಶವ ರಥೋತ್ಸವದ ವೇಳೆ ಕುರಾನ್‌ ಪಠಣದ

ಬಗ್ಗೆ ಮಾತನಾಡಿದ ಅವರು, ರಥೋತ್ಸವ ದಿನ ಯಾರು ಯಾರು ಯಾವ ಕರ್ತವ್ಯ ನಿರ್ವಹಿಸಬೇಕು ಏನೇನು ವ್ಯತ್ಯಾಸ ಆಗಿದೆ. ಜನರಲ್ಲಿ ಏನು ಗೊಂದಲ ಆಗಿದೆ ಅವುಗಳ ಪರಿಶೀಲನೆಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ಇಂದು ಭೇಟಿ ನೀಡಲಾಗಿದೆ. ಚನ್ನಕೇಶವ ದೇವಾಲಯ ದಲ್ಲಿ ಯಾರು? ಯಾವ ಸಂದರ್ಭದಲ್ಲಿ? ಯಾವ ಕರ್ತವ್ಯ? ಹೇಗೆ ಮಾಡಬೇಕು? ಎಂದು ಕೈಬರಹದ ಮೂಲಕ ಉಲ್ಲೇಖ ಮಾಡಲಾಗಿದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಅದು ಬಿಡುಗಡೆ ಆಗಿದೆ. ಅದರಂತೆ ಎಲ್ಲ ವಿಧಿ ವಿದಾನ, ಪೂಜಾ ಕೈಂಕರ್ಯ ಕರ್ತವ್ಯ ನಡೆಯುತ್ತಿದೆ. ಆದರೆ, ಮದ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಮೂಲ ಗ್ರಂಥ ಪರಿಶೀಲನೆ ಮಾಡಿದ್ದೇವೆ. ಈ ಕೈಪಿಡಿಯಲ್ಲಿ ರಥದ ಮುಂದೆ ಖುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಹೇಳಿಲ್ಲ ಎಂಬ ಮಾಹಿತಿ ತಿಳಿಸಿದರು.

Leave a Comment