Coastal Bulletin

ಮೈಸೂರು: ಜೀವನ ಒಂದು ರಂಗಭೂಮಿ, ಈ ಅಂಕಣದಲ್ಲಿ ಬದುಕಿ ಬಾಳುವುದೇ ನಿಜವಾದ ನಾಟಕ, ಈ ನಾಟಕ ರಂಗವನ್ನು ಮುನ್ನಡೆಸಿಕೊಂಡು ಸಾಗುವುದೇ ಕಲಾವಿದನ ಜವಾಬ್ದಾರಿ ಎಂದು ನಗರಪಾಲಿಕಾ ಸದಸ್ಯರಾದ ಸತೀಶ್ ಅಭಿಪ್ರಾಯಪಟ್ಟರು.

ಪರಿಸರ ಸ್ನೇಹಿ ತಂಡದ ವತಿಯಿಂದ ನಗರದ ಬಂಬೂ ಬಜಾರ್ ನಲ್ಲಿರುವ ಅಂದ  ಮತ್ತು ಕಿವುಡರ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಲವಾರು ವರ್ಷದಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಕ್ಷೇತ್ರದ ರಂಗಭೂಮಿ ಕಲಾವಿದರಾದ ಕಾಳಪ್ಪ, ಮೂರ್ತಿ, ವೈರ್ಮುಡಿ, ಸ್ವಾಮಿ, ಮಹದೇವು, ಮಹದೇವ್ ಸ್ವಾಮಿ, ಸನ್ಮಾನಿಸಿ ಮಾತನಾಡಿದ ಅವರುಆಧುನಿಕತೆಯ ಭರಾಟೆಯಲ್ಲಿ ರಂಗಭೂಮಿ ಮೂಲೆ ಗುಂಪಾಗುತ್ತಿದೆ. ರಂಗಭೂಮಿ ಜೀವಂತವಾಗಿಡಲು ಕಲಾವಿದರ ಶ್ರಮ ಅಗತ್ಯ. ಅಂತಹ ಕಲಾವಿದರಿಗೆ ನಾವುಗಳು ಮತ್ತು ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು. ಕಲಾವಿದರನ್ನು ಪೋಷಿಸುವ ಮೂಲಕ ರಂಗಭೂಮಿಯನ್ನು ಜೀವಾಂತವಾಗಿಡಲು ಎಲ್ಲರೂ ಶ್ರಮಿಸಬೇಕೆಂದರು.

ಬಿಜೆಪಿ ಮುಖಂಡರು ಹಾಗೂ ಕಲಾವಿದರಾದ  ಜಯಪ್ರಕಾಶ್ (

ಜೆಪಿ),ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆಯಿದೆ, ಪ್ರತಿಭೆಯನ್ನು ಅನಾವರಣಗೊಳಿಸಿಕೊಂಡು ಸಾಧನೆಗೈಯಬೇಕು. ದೈನಂದಿನ ಬದುಕಿನ ಆಗುಹೋಗುಗಳನ್ನು ಪ್ರತಿಬಿಂಬಿಸುವ ಶಕ್ತಿ ರಂಗಭೂಮಿಗಿದೆ ಎಂದರು.

ಇದೇ ಸಂದರ್ಭದಲ್ಲಿ ರಚನಾ ಎಂಟರ್ಪ್ರೈಸಸ್ ಮಾಲೀಕರಾದ  ಬಸವರಾಜ್ ಅಂದ ಮತ್ತು ಕಿವುಡ ಮಕ್ಕಳ ಶಾಲೆಗೆ 5000 ನೀಡಿದರು.

ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಸತೀಶ್, ಬಿಜೆಪಿ ಮುಖಂಡರು ಹಾಗೂ ಕಲಾವಿದರಾದ  ಜಯಪ್ರಕಾಶ್ ( ಜೆಪಿ), ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಂದ ಮಕ್ಕಳ ಶಾಲೆಯ ಮುಖ್ಯಸ್ಥರಾದ ಸತೀಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಕಲಾವಿದರಾದ ಬಸವರಾಜು ,ಬಿಜೆಪಿ ಮುಖಂಡರಾದ ಮಂಜುಳಾ, ರಘು, ಮಹೇಶ್, ಅಭಿ, ಮನೋಹರ,  ಹಾಗೂ ಇನ್ನಿತರರು ಹಾಜರಿದ್ದರು.

Leave a Comment