ಇಂದು ಸಿಎಮ್ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ಪ್ರಮಾಣ ವಚನ- ದಾರಿಯಲ್ಲಿ ಹೋಗೋರಿಗೆಲ್ಲ ದುಡ್ಡು ಕೊಡೊಕಾಗಲ್ಲ - ಡಿಕೆಶಿ.

Coastal Bulletin
ಇಂದು ಸಿಎಮ್ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ಪ್ರಮಾಣ ವಚನ- ದಾರಿಯಲ್ಲಿ ಹೋಗೋರಿಗೆಲ್ಲ ದುಡ್ಡು ಕೊಡೊಕಾಗಲ್ಲ - ಡಿಕೆಶಿ.

ಬೆಂಗಳೂರು: ಗ್ಯಾರಂಟಿಗಳ ಮೇಲೆಯೆ ಅಧಿಕಾರ ಹಿಡಿದ ಕಾಂಗ್ರೆಸ್‌ ಪಕ್ಷ, ಶನಿವಾರ ನಡೆದ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ತನ್ನೆಲ್ಲಾ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಇದು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿರುವ ಮಾತಿ ವಿವಾದಕ್ಕೆ ಕಾರಣವಾಗಿದೆ.

ಕ್ಯಾಬಿನೆಟ್‌ ಸಭೆ ಮುಗಿಸಿ ಗ್ಯಾರಂಟಿ ನಿರ್ಧಾರದ ಕುರಿತಾಗಿ ಘೋಷಣೆ ಮಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, 'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ' ಎಂದು ಮಾಧ್ಯಮದವರಿಗೆ ಕೊಂಕಾಗಿ ಪ್ರಶ್ನೆ ಮಾಡಿದ್ದಾರೆ. ಚುನಾವಣೆಯ ವೇಳೆ ಎಲ್ಲರಿಗೂ ಗ್ಯಾರಂಟಿ ಕೊಡೋದಾಗಿ ಸ್ವತಃ ಡಿಕೆ ಶಿವಕುಮಾರ್‌ ಅವರೇ ಹೇಳಿದ್ದರೆ, ಸುದ್ದಿಗೋಷ್ಠಿಯಲ್ಲಿ ಮಾತ್ರ ಎಲ್ಲಾ ವಿವರಗಳನ್ನು ಪಡೆದು ಅರ್ಹರಿಗೆ ಮಾತ್ರವೇ ಗ್ಯಾರಂಟಿ ನೀಡುವ ಮಾತನಾಡಿದ್ದಾರೆ.

Leave a Comment