Coastal Bulletin

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರಬೈಲಿ ನಲ್ಲಿ, ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಉರ್ವ ಸ್ಟೋರ್, ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ "ಸ್ವಸ್ತಿಕ ಹಳ್ಳಿ ಹಬ್ಬ"ದ ಅಂಗವಾಗಿ ಎ ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಪ್ ಡೆಂಟಲ್ ಸೈನ್ಸ್ ದೇರಳಕಟ್ಟೆ ಇವರ ಸಹಯೋಗದಲ್ಲಿ ಉಚಿತ ಹಲ್ಲು ಚಿಕಿತ್ಸ ಶಿಬಿರವು ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಬಿ ಎ ಪದವಿ ಪೂರ್ವ ಕಾಲೇಜು ತುಂಬೆ ಇದರ ಪ್ರಾಂಶುಪಾಲರಾದ ಗಂಗಾಧರ ಆಳ್ವಕೆ ಎನ್ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಎಬಿ ಶೆಟ್ಟಿ ಡೆಂಟಲ್ ಕಾಲೇಜಿನ ಡಾ ದಿಶಾ,ಜೆ ಸಿ ಐ ಮಂಗಳೂರು ಸ್ಪೂರ್ತಿ

ಇದರ ಅಧ್ಯಕ್ಷರಾದ ಜೆಸಿ ವೀಣಾ, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಊರ್ವಸ್ಟೋರ್ ಇದರ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳ, ಸಎನ್ ಎಸ್ ಎಸ್ ಯೋಜನಾಧಿಕಾರಿ ವಿದ್ಯಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

Leave a Comment